ಧಾರವಾಡ : ಪಕ್ಷೇತರನಾದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ 5ನೇ ವಾರ್ಡ್ ಅಭ್ಯರ್ಥಿ ಸೂರಜ್ ಪುಡಕಲಕಟ್ಟಿ ಬಿರುಸಿನ ಪ್ರಚಾರ ವಜ್ರದ ಹೊಳಪು ಪಡೆದಿದ್ದು, ಹೊಸ ಹೊಸ ಅಭಿವೃದ್ಧಿ ನೀಲಿ ನಕಾಶೆ ನೋಡಿ ಜನ ಸೂರಜ್ ಬೆಂಬಲಕ್ಕೆ ನಿಂತಿದ್ದಾರೆ.
ಧಾರವಾಡದ 5ನೇ ವಾರ್ಡ್ ಅಭ್ಯರ್ಥಿ ತನ್ನ ಗೆಳೆಯರ ಬಳಗದ ಸಹಕಾರದಿಂದ ವಾರ್ಡ್ 5ರ ಜನರ ಅರ್ಶಿವಾದಕ್ಕೆ ಶಿರ ಬಾಗಿದ್ದು ಅದಕ್ಕಾಗಿ ಪ್ರತಿಯೊಬ್ಬರ ಮನೆ ಮನ ಎರಡನ್ನು ತಲುಪುವ ಕಾಯಕದಲ್ಲಿ ತೊಡಗಿದ್ದಾರೆ.
ಈಗಾಗಲೇ ತುರುಸಿನ ಸ್ಪರ್ಧೆಯಲ್ಲಿ ಬಿರುಸಿನ ಪ್ರಚಾರ ಆರಂಭಿಸಿದ ಸೂರಜ್ ತಾನು ಮಾಡಿದ ಅಭಿವೃದ್ಧಿ ಕಾರ್ಯದ ಸಹಕಾರ ಹಾಗೂ ಈ ಕಳೆದ 3 ವರ್ಷಗಳಿಂದ ವಾರ್ಡ್ 5ರಲ್ಲಿ ಮಾಡಿದ ಸಾಮಾಜಿಕ, ಆರ್ಥಿಕ, ವಿವಿಧ ಸೌಲಭ್ಯ ಮೂಲ ಸೌಕರ್ಯಗಳ ವಿವರದ ಬಿತ್ತಿಪತ್ರ ಹಿಡಿದು ಜನರ ಮತ ಕೇಳುತ್ತಿದ್ದು ಜನತೆ ವಿಶ್ವಾಸದಿಂದ ಯುವನಾಯಕನನ್ನು ಬೆಂಬಲಿಸುತ್ತಾರೆಂಬ ಖುಷಿಯಲ್ಲಿದ್ದಾರೆ.
Kshetra Samachara
29/08/2021 09:53 am