ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ ಶಾಹೀನ್ ಯಾಸೀನ್ ಹಾವೇರಿಪೇಟ

ಧಾರವಾಡ: ಕಾಂಗ್ರೆಸ್‌ನಿಂದ ತಮ್ಮ ಪತ್ನಿಗೆ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಪಾಲಿಕೆ ಮಾಜಿ ಸದಸ್ಯ ಯಾಸೀನ್ ಹಾವೇರಿಪೇಟ ಅವರ ಪತ್ನಿಗೆ ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದು, ಇದೀಗ ಯಾಸೀನ್ ಅವರು ತಮ್ಮ ಪತ್ನಿ ಶಾಹೀನ್ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಆರನೇ ವಾರ್ಡಿನಿಂದ ಚುನಾವಣಾ ಕಣಕ್ಕಿಳಿಸಿದ್ದಾರೆ.

ಸದ್ಯ ಆರನೇ ವಾರ್ಡಿನಲ್ಲಿ ಹಾವೇರಿಪೇಟ ಅವರ ಸ್ಪರ್ಧೆಯಿಂದ ಚುನಾವಣಾ ಕಣ ರಂಗು ಪಡೆದುಕೊಂಡಿದೆ. ಈ ಹಿಂದೆ ಯಾಸೀನ್ ಅವರು ಪಾಲಿಕೆ ಸದಸ್ಯರಾಗಿದ್ದ ಸಂದರ್ಭದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿಸಿದ್ದಾರೆ, ಇದೀಗ ತಮ್ಮ ಪತ್ನಿ ಶಾಹೀನ್ ಅವರನ್ನೂ ಕಣಕ್ಕಿಳಿಸಿರುವ ಯಾಸೀನ್ ಅವರು ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡಬೇಕೆನ್ನುವ ಕನಸು ಹೊಂದಿದ್ದಾರೆ.

Edited By : Manjunath H D
Kshetra Samachara

Kshetra Samachara

28/08/2021 08:31 pm

Cinque Terre

56.67 K

Cinque Terre

5

ಸಂಬಂಧಿತ ಸುದ್ದಿ