ಈಗಾಗಲೇ ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿ, ಕಮಾಲ್ ಮಾಡಿರುವ ಗಣೇಶ ಟಗರಗುಂಟಿ, ಗೆಲುವಿನ ಅಭಿಯಾನ ಮುಂದುವರೆಸುವ ಉತ್ಸಾಹದಲ್ಲಿ ಮತ್ತೆ ಚುನಾವಣೆ ಕಣಕ್ಕೆ ಇಳಿದಿದ್ದಾರೆ. ಈ ಬಾರಿ 71 ನೇ ವಾರ್ಡ್ ನಿಂದ ಗೆಲ್ಲುವ ಮೂಲಕ ತಮ್ಮ ಅಸ್ತಿತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಲು ಮುಂದಾಗಿದ್ದಾರೆ.
ಹು-ಧಾ ಮಹಾನಗರ ಪಾಲಿಕೆ ಚುನಾವಣೆಯ ಮತದಾನಕ್ಕೆ ದಿನ ಗಣನೇ ಆರಂಭವಾಗಿದೆ. ಈ ನಡುವೆ ಗಣೇಶ ಟಗರಗುಂಟಿ ತಮ್ಮ ಕ್ಷೇತ್ರದ ಜನರ ಪ್ರೀತಿ ವಿಶ್ವಾಸವನ್ನು ಉಳಿಸಿಕೊಳ್ಳಲು, ಅವರ ಒತ್ತಾಯದಂತೆ ಸೇವೆ ಮಾಡಲು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ.
ಗಣೇಶ ಟಗರಗುಂಟಿ 2007 ರಿಂದ 2019 ರ ವರೆಗೆ ಮಹಾನಗರ ಪಾಲಿಕೆಯ ಸದಸ್ಯನಾಗಿ ಮತ್ತು ಎರಡು ಬಾರಿ ವಿರೋಧ ಪಕ್ಷದ ನಾಯಕನಾಗಿ ಯಾವುದೇ ಒಂದು ಕಪ್ಪು ಚುಕ್ಕೆ ಇಲ್ಲದ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಹಿಂದಿನ 59 ನೇ ವಾರ್ಡ್ ನಲ್ಲಿ ಕಳೆದ 10 ವರ್ಷಗಳ ಅವಧಿಯಲ್ಲಿ ವಾರ್ಡ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅಷ್ಟಕ್ಕೂ ಅವರ ಮುಂದಿನ ಅಜೆಂಡಾ ಏನು ಎಂಬುದನ್ನು ಅವರಿಂದಲೇ ಕೇಳಿ.
ಈ ಬಾರಿ ವಾರ್ಡ್ ನಂ. 71ಕ್ಕೆ ಹೊಲಿಗೆ ಮಷಿನ್ ಚಿಹ್ನೆದೊಂದಿಗೆ ಕ್ರಮ ಸಂಖ್ಯೆ 8ರ ಮೂಲಕ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ ಗಣೇಶ ಟಗರಗುಂಟಿ......
ಗಣೆಶ ಟಗರಗುಂಟಿ ಅವರ ಕಾರ್ಯಗಳೆಂದರೆ ನಿವಾಸಿಗಳಿಗೆ ಹಕ್ಕು ಪತ್ರ ಒದಗಿಸುವುದು, ಕಾಂಕ್ರೀಟ್ ರಸ್ತೆಗಳು, ಮನೆ ಮನೆಗೆ 24X7 ಶುದ್ದ ನೀರಿನ ವ್ಯವಸ್ಥೆ, ವಾರ್ಡಿನ ಸ್ವಚ್ಛತೆ, ಅಂಗನವಾಡಿ ಕೇಂದ್ರಗಳ ಅಭಿವೃದ್ಧಿ, ಸಮುದಾಯ ಭವನಗಳ ನಿರ್ಮಾಣ, ಒಳಚರಂಡಿ ನಿರ್ಮಾಣ, ತೆರೆದ ಚರಂಡಿ ನಿರ್ಮಾಣ, ನಾಲಾದ ತಡೆಗೋಡೆ, ಬ್ರಿಡ್ಜ್ ನಿರ್ಮಾಣ, ಬೀದಿ ದೀಪಗಳನ್ನು ಒದಗಿಸಿದ್ದಾರೆ.
ಇದಲ್ಲದೇ ಉದ್ಯಾನವನ ನಿರ್ಮಾಣ, ಸ್ಮಶಾನ ಅಭಿವೃದ್ಧಿ, ಶುದ್ದ ನೀರಿನ ಘಟಕ ನಿರ್ಮಾಣ ಮತ್ತು ಧಾರ್ಮಿಕ ಸ್ಥಳಗಳ ಅಭಿವೃದ್ಧಿ, ಲಾಕ್ ಡೌನ್ ಸಮಯದಲ್ಲಿ ಬಡವರಿಗೆ ಆಹಾರ ಕಿಟ್ ವಿತರಣೆ, ಸೇರಿದಂತೆ ಹತ್ತು ಹಲವು ಕಾರ್ಯಗಳನ್ನು ಮಾಡಿ ವಾರ್ಡ್ ಜನರ ನಿಜವಾದ ನಾಯಕರೆನಿಸಿದ್ದಾರೆ. ಈ ಕಾರಣದಿಂದಲೇ ಗಣೇಶ ಟಗರಗುಂಟಿ ಅವರು ವಾರ್ಡ್ ಜನರ ಒತ್ತಾಯದ ಮೇರೆಗೆ 71 ನೇ ವಾರ್ಡಿನಿಂದ ಪಕ್ಷೇತರ ಅಭ್ಯರ್ಥಿಯಾಗಿ ಹೊಲಿಗೆ ಮಷಿನ್ ಚಿಹ್ನೆದೊಂದಿಗೆ ಕ್ರಮ ಸಂಖ್ಯೆ 8 ಕ್ಕೆ ಸ್ಪರ್ಧೆ ಮಾಡುತ್ತಿದ್ದು, ಮತ್ತೊಮ್ಮೆ ಜನರು ಇವರೇ ಬೇಕೆಂದು ಕೇಳುತ್ತಿದ್ದಾರೆ.
ಇನ್ನು ಗಣೇಶ ಟಗರಗುಂಟಿ ಮಾಡಿದ ಅಭಿವೃದ್ಧಿ ಕಾರ್ಯಗಳೇ ಈ ಬಾರಿ ಶ್ರೀರಕ್ಷೆಯಾಗಲಿದ್ದು, ಅವರ ಗೆಲುವು ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ವಾರ್ಡ್ ನಿವಾಸಿಗಳು.
Kshetra Samachara
28/08/2021 04:11 pm