ಹುಬ್ಬಳ್ಳಿ: ಅಭಿವೃದ್ಧಿಯಾಗದೇ ಉಳಿದ ವಾರ್ಡಿನ ಹಲವಾರು ಬಡಾವಣೆಗಳನ್ನು ಅಭಿವೃದ್ಧಿ ಮಾಡಿ ಜನರ ಬದುಕನ್ನು ಉತ್ತಮಗೊಳಿಸಲು ಇಲ್ಲೊಬ್ಬ ದಂಪತಿ ನಿರ್ಧಾರ ಮಾಡಿದ್ದಾರೆ. ಜನರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ ಜನರ ಬವಣೆಯನ್ನು ಬಯಲು ಮಾಡಲು ಸಿದ್ಧರಾಗಿ ಪಾಲಿಕೆ ಚುನಾವಣೆಗೆ ಸನ್ನದ್ಧರಾಗಿದ್ದಾರೆ. ಹಾಗಿದ್ದರೇ ಯಾರು ಆ ದಂಪತಿಗಳು ಅಂತೀರಾ ಇಲ್ಲಿದೆ ನೋಡಿ ಕಂಪ್ಲಿಟ್ ಡಿಟೈಲ್ಸ್...
ಜನರ ಸಮಸ್ಯೆಗಳನ್ನು ಸ್ಥಳೀಯವಾಗಿ ಅನುಭವಿಸಿದ ದಂಪತಿ ಈಗ ನಮ್ಮ ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡುಕೊಳ್ಳಬೇಕು ಎಂಬುವಂತೇ ವಿದ್ಯಾವಂತ ದಂಪತಿ ಈಗ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧೆ ನಡೆಸಿದ್ದಾರೆ. ಕಾಂಗ್ರೆಸ್ ಮುಖಂಡ ದೀಪಕ ಮೆಹರವಾಡೆ ಅವರ ಪತ್ನಿ ರಾಜೇಶ್ವರಿ ದೀಪಕ ಮೆಹರವಾಡೆ ಈಗ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಾರ್ಡ್ ನಂಬರ 49ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿದಿದ್ದಾರೆ. ಸಾಕಷ್ಟು ಜನಸೇವೆಯ ಮೂಲಕ ಗುರುತಿಸಿಕೊಂಡಿರುವ ಈ ದಂಪತಿ ಜನರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಪಣತೊಟ್ಟಿದ್ದಾರೆ.
ಈಗಾಗಲೇ ಜನರ ಸೇವೆಯಿಂದ ಜನಮನ್ನಣೆ ಪಡೆದ ದೀಪಕ ಮೆಹರವಾಡೆ ಅವರು ಯಾರೇ ಸಹಾಯ ಕೇಳಿ ಬಂದರೂ ಇಲ್ಲ ಎನ್ನದೇ ಸಹಾಯ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿರುವ ದೀಪಕ ಮೆಹರವಾಡೆ ಅವರ ಪಕ್ಷನಿಷ್ಠೆಯನ್ನು ಮೆಚ್ಚಿರುವ ಕಾಂಗ್ರೆಸ್ ನಾಯಕರು ದೀಪಕ ಅವರ ಪತ್ನಿ ರಾಜೇಶ್ವರಿ ಮೆಹರವಾಡೆ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಇನ್ನೂ ನಿಮ್ಮ ಒಂದು ಅಮೂಲ್ಯವಾದ ಮತ ನಿಮ್ಮ ಸಮಸ್ಯೆಗಳನ್ನು ದೂರ ಮಾಡುತ್ತದೆ ಎಂದು ಅಭ್ಯರ್ಥಿ ಮನವಿ ಮಾಡಿದ್ದಾರೆ.
ನಮ್ಮಿಂದಲೇ ಸಮಾಜದ ಬದಲಾವಣೆಗೆ ಅಡಿಪಾಯ ಹಾಕೋಣ ಎಂದು ಕಂಕಣಬದ್ಧರಾಗಿದ್ದಾರೆ. ಜನರ ವಿಶ್ವಾಸಕ್ಕೆ ಬದ್ಧರಾಗಿರುವ ಮೆಹರವಾಡೆ ದಂಪತಿ ಈಗ ಜನರ ಆಶೀರ್ವಾದದೊಂದಿಗೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.
ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ಸುಮಾರು ವರ್ಷಗಳಿಂದ ಶ್ರಮಿಸುತ್ತಿರುವ ದೀಪಕ ಮೆಹರವಾಡೆ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ. ಇನ್ನೂ ಪತ್ರಕರ್ತರಾಗಿರುವ ರಾಜೇಶ್ವರಿ ಮೆಹರವಾಡೆ ಅವರು ಸಮಾಜದ ಅಂಕುಡೊಂಕಗಳನ್ನು ತಿದ್ದಲು ಈ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಸಾಕಷ್ಟು ಬದಲಾವಣೆ ದೂರದೃಷ್ಟಿಯನ್ನು ಇಟ್ಟುಕೊಂಡಿದ್ದಾರೆ.
ಈಗಾಗಲೇ ಅಭಿವೃದ್ಧಿಯನ್ನು ಎದುರು ನೋಡುತ್ತಿರುವ ಜನರಿಗೆ ಈ ದಂಪತಿ ಆಶಾಭಾವನೆ ನಿಜಕ್ಕೂ ಸ್ಪಂದನೀಯವಾಗಿದೆ. ಇವರ ಕಾರ್ಯಕ್ಕೆ ಈಗಾಗಲೇ ಜನರು ಆಶೀರ್ವಾದ ಮಾಡುವ ಭರವಸೆ ನೀಡಿದ್ದು, ಚುನಾವಣೆಯಲ್ಲಿ ಜಯಶಾಲಿಯಾಗಿ ಸೇವೆಗೆ ಸಿದ್ಧರಾಗಲಿ ಎಂದು ಜನರು ಹಾರೈಸಿದ್ದಾರೆ.
Kshetra Samachara
28/08/2021 11:28 am