ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಜನರೇ ಬೆಳೆಸಿದ ಜನನಾಯಕ ತಿಪ್ಪಣ್ಣ ಮಜ್ಜಿಗಿ: ನಿಮ್ಮ ಸೇವೆಗೆ ಸದಾಸಿದ್ಧ ಗೆದ್ದು ಬರಲಿ ಚುನಾವಣೆ ಯುದ್ಧ..!

ಹುಬ್ಬಳ್ಳಿ: ಅವರು ಸಾರ್ವಜನಿಕ ಸೇವೆಯಲ್ಲಿಯೇ ಖುಷಿಯನ್ನು ಕಂಡಿರುವ ಜನನಾಯಕ. ಪಾಲಿಕೆ ಸದಸ್ಯರಾಗಿ, ಬಿಜೆಪಿ ನಾಯಕರಾಗಿ ರಾಜಕೀಯ ರಂಗದಲ್ಲಿ ಸಂಚಲನ ಸೃಷ್ಟಿಸಿ ಎಲ್ಲರ ಮನೆಯ ಮಗನಾಗಿ ಎಲ್ಲರ ಮನಸ್ಸನ್ನು ಗೆದ್ದಿರುವ ಕಾಯಕಯೋಗಿ. ಹಿಡಿದ ಕಾರ್ಯವನ್ನು ಕೈ ಬಿಡದೇ ಅಭಿವೃದ್ಧಿ ಕಾರ್ಯದ ಮೂಲಕ ಗುರುತಿಸಿಕೊಂಡಿರುವ ಈ ಜನನಾಯಕ. ಹಾಗಿದ್ದರೇ ಯಾರು ಜನನಾಯಕ ಆತನ ಕಾರ್ಯಗಳಾದರೂ ಏನು ಅಂತೀರಾ ಇಲ್ಲಿದೆ ನೋಡಿ ಕಂಪ್ಲಿಟ್ ಡಿಟೈಲ್ಸ್...

ಧಾರವಾಡ ಜಿಲ್ಲೆಯ ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತ, ನಾಯಕನೇ ಈ ತಿಪ್ಪಣ್ಣ ಮಜ್ಜಿಗಿ. ಆಶ್ವಾಸನೆಗಳು ಜನರ ಬಾಯಲ್ಲಿ ಇರಬಾರದು. ಅಭಿವೃದ್ಧಿ ಕಾರ್ಯಗಳೇ ಜನರ ಮನದಲ್ಲಿ ಉಳಿಯಬೇಕು ಎಂಬುವಂತೇ. ತಮ್ಮ ವಾರ್ಡ್ ನ್ನು ಮಾದರಿಯ ವಾರ್ಡ್ ಆಗಿ ನಿರ್ಮಾಣ ಮಾಡಿರುವ ತಿಪ್ಪಣ್ಣ ಮಜ್ಜಿಗೆಯವರು ಈಗ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಸರ್ಕಾರದ ಪ್ರತಿಯೊಂದು ಯೋಜನೆಗಳು ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಎಂದು ಆಶಾಭಾವನೆ ಹೊಂದಿರುವ ಇವರು ಈ ಬಾರಿ 38ನೇ ವಾರ್ಡಿನಿಂದ ಪಾಲಿಕೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಹಾಗಿದ್ದರೇ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅವರ ಬಾಯಿಂದಲೇ ಕೇಳಿ...

ಕಮಲ ಪಡೆಯಲ್ಲಿ ಪಕ್ಷ ನಿಷ್ಠೆ, ಶಿಸ್ತು, ವ್ಯವಸ್ಥಿತ ಕಾರ್ಯ ಯೋಜನೆಯಿಂದ ಜನಮನ್ನಣೆ ಪಡೆದ ತಿಪ್ಪಣ್ಣ ಮಜ್ಜಿಗಿಯವರು ಜನರೇ ಬೆಳೆಸಿದ ಜನನಾಯಕ. ಇನ್ನೂ ಮಜ್ಜಿಗಿಯವರ ಕುಟುಂಬದಲ್ಲಿ ತಿಪ್ಪಣ್ಣ ಮಜ್ಜಿಗಿಯವರು ಮಾತ್ರವಲ್ಲದೆ ಅಶ್ವಿನಿ ಮಜ್ಜಿಗಿಯವರು ಕೂಡ ಮಹಾಪೌರರಾಗಿ ಪಾಲಿಕೆ ಸದಸ್ಯರಾಗಿ ಸದಾ ಸಾರ್ವಜನಿಕ ಸೇವೆಯನ್ನು ಮಾಡಿದ್ದಾರೆ. ಕುಟುಂಬವೇ ರಾಜಕಾರಣದ ಮೂಲಕ ಸಾಮಾಜಿಕ ಸೇವೆಯಲ್ಲಿ ತೊಡಗಿದ್ದು, ಈ ಬಾರಿ ಕೂಡ ಜನರೇ ಪ್ರೋತ್ಸಾಹಿಸಿ ಸ್ಪರ್ಧೆಗೆ ಇಳಿಯುವಂತೆ ಮಾಡಿದ್ದಾರೆ. ಜನರ ಪ್ರೋತ್ಸಾಹ, ಜನರ ಪ್ರೀತಿ ಅಭಿಮಾನ ಗಳಿಸಿರುವ ತಿಪ್ಪಣ್ಣ ಮಜ್ಜಿಗಿ ಅವರು ಹು-ಧಾ ಸೆಂಟ್ರಲ್ ಕ್ಷೇತ್ರದ ಮನೆಯ ಮಗನಾಗಿದ್ದಾರೆ.

ಇನ್ನೂ ತಿಪ್ಪಣ್ಣ ಮಜ್ಜಿಗಿಯವರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಹೇಳುತ್ತಾ ಹೋದರೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಸ್ವಚ್ಚತೆ, ಉತ್ತಮ ಪರಿಸರ ನಿರ್ಮಾಣ, ಸಾರ್ವಜನಿಕರ ಮೂಲಭೂತ ಸೌಕರ್ಯಗಳ ಒದಗಿಸುವುದರಿಂದ ಅವರು ಮಾಡಿದ ಕಾರ್ಯಕ್ಕೆ ಅವರ ವಾರ್ಡ್ ಸೂಕ್ತ ನಿದರ್ಶನವಾಗಿದೆ. ರಸ್ತೆ ನಿರ್ಮಾಣ, ಚರಂಡಿ ನಿರ್ಮಾಣದಂತಹ ಹತ್ತು ಹಲವಾರು ಕಾರ್ಯಗಳನ್ನು ಮಾಡಿದ್ದಾರೆ. ಅಲ್ಲದೇ ಕೋವಿಡ್ ಸಂದರ್ಭದಲ್ಲಿ ಜನರ ಹಸಿವನ್ನು ನೀಗಿಸುವ ಮೂಲಕ ಜನರ ಕಣ್ಣೀರು ಒರೆಸಿದ ಜನನಾಯಕ.

ಒಟ್ಟಿನಲ್ಲಿ ಸಾರ್ವಜನಿಕರ ಸೇವೆಗೆ ಪಣತೊಟ್ಟಿರುವ ಜನನಾಯಕ ತಿಪ್ಪಣ್ಣ ಮಜ್ಜಿಗಿಯವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಜನರು ಆಶೀರ್ವಾದ ಮಾಡಿದ್ದಾರೆ. ಮತ್ತೊಮ್ಮೆ ಜನಾಶೀರ್ವಾದ ಪಡೆದು ಜನರ ಸೇವೆ ಮಾಡಲು ಸಿದ್ಧರಾಗಲಿ ಎಂಬುವುದು ನಮ್ಮ ಆಶಯ...

Edited By : Shivu K
Kshetra Samachara

Kshetra Samachara

28/08/2021 09:46 am

Cinque Terre

72.43 K

Cinque Terre

7

ಸಂಬಂಧಿತ ಸುದ್ದಿ