ಹುಬ್ಬಳ್ಳಿ- ಹು-ಧಾ ಮಹಾನಗರ ಪಾಲಿಕೆ ಚುನಾವಣೆಗೆ ವಾರ್ಡ್ ನಂಬರ್ 54 ರ ಪಕ್ಷೇತರ ಅಭ್ಯರ್ಥಿಯಾದ ಶ್ಯಾಮಲಾ ಸುರೇಶ ಶೇಟ್ ಅವರಿಗೆ ಚುನಾವಣೆ ಅಧಿಕಾರಿಗಳು ನೀರಿನ ಟ್ಯಾಂಕ್ ಚಿಹ್ನೆ ನೀಡಿದ್ದು, ಶ್ಯಾಮಲಾ ಶೇಟ್ ಅವರು ನೀರಿನ ಟ್ಯಾಂಕ್ ಚಿಹ್ನೆಯೊಂದಿಗೆ ಚುನಾವಣಾ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಎಸ್, ಚುನಾವಣೆ ಅಧಿಕಾರಿಗಳು ಪಕ್ಷೇತರ ಅಭ್ಯರ್ಥಿ ಶ್ಯಾಮಲಾ ಶೇಟ್ ಅವರಿಗೆ ಕ್ರಮ ಸಂಖ್ಯೆ 9 ಮತ್ತು ನೀರಿನ ಟ್ಯಾಂಕ್ ಚಿಹ್ನೆ ನೀಡಿದ್ದಾರೆ.
ಇನ್ನೂ ಈ ಕುರಿತು ಪಬ್ಲಿಕ್ ನೆಕ್ಟ್ ಜೊತೆಗೆ ಮಾತನಾಡಿದ ಶ್ಯಾಮಲಾ ಶೇಟ್ ಮತ್ತು ಅವರ ಮಗಳು ಸರಿತಾ ಶೇಟ್ ಅವರು, ಕ್ರಮ ಸಂಖ್ಯೆ 9 ಹಾಗೂ ನೀರಿನ ಟ್ಯಾಂಕ್ ಚಿಹ್ನೆ ಬಂದಿದ್ದು ತುಂಬಾ ಸಂತೋಷವಾಗಿದೆ. ಯಾವ ಚಿಹ್ನೆ ಸಿಕ್ಕಿದ್ರು ನಮಗೆ ಖುಷಿ ಇದೆ ಎಂದರು.
Kshetra Samachara
27/08/2021 07:31 pm