ಧಾರವಾಡ: ವಾರ್ಡ್ ನಂಬರ್ 5 ರಿಂದ ಪಕ್ಷೇತರ ಅಭ್ಯರ್ಥಿಯಾಗಿ ಪಾಲಿಕೆ ಚುನಾವಣಾ ಕಣಕ್ಕಿಳಿದಿರುವ ಸೂರಜ್ ಪುಡಕಲಕಟ್ಟಿ ಅವರು ತಮ್ಮ ವಾರ್ಡಿನಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ವಾರ್ಡ್ ನಂಬರ್ 5 ರಲ್ಲಿ ಬರುವ ವಿವಿಧ ಬಡಾವಣೆಗಳಲ್ಲಿ ತಮ್ಮ ಬೆಂಬಲಿಗರೊಂದಿಗೆ ತೆರಳಿ ಪ್ರಚಾರ ನಡೆಸಿದ ಅವರು, ಪಾಲಿಕೆ ಚುನಾವಣೆಯಲ್ಲಿ ಆರಿಸಿ ತಂದು ತಮ್ಮ ಸೇವೆ ಮಾಡಲು ಅನುಕೂಲ ಮಾಡಿಕೊಡಬೇಕು ಎಂದು ಜನರಲ್ಲಿ ಮನವಿ ಮಾಡಿದರು.
ಪ್ರತಿನಿತ್ಯ ಸೂರಜ್ ಪುಡಕಲಕಟ್ಟಿ ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ತೆರಳಿ ಪ್ರಚಾರ ಮಾಡುತ್ತಿದ್ದು, ಇವರ ಸ್ಪರ್ಧೆಯಿಂದ ಐದನೇ ವಾರ್ಡ್ ರಂಗು ಪಡೆದುಕೊಂಡಿದೆ. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸೂರಜ್ ಅವರಿಗೆ ವಜ್ರದ ಚಿನ್ಹೆ ನೀಡಲಾಗಿದ್ದು, ವಜ್ರದ ಗುರುತಿಗೆ ಮತ ಹಾಕುವಂತೆ ಮನವಿ ಮಾಡುತ್ತಿದ್ದಾರೆ.
Kshetra Samachara
27/08/2021 01:41 pm