ಹುಬ್ಬಳ್ಳಿ: ನಮ್ಮ ಅಧಿಕಾರಿಗಳು ನಗರವನ್ನು ಸ್ಮಾರ್ಟ್ ಮಾಡಲು ಹೊರಟಿದ್ದಾರೆ. ಆದರೆ ವಾರ್ಡ್‌ಗಳು ಮಾತ್ರ ಸಮಸ್ಯೆಗಳಲ್ಲಿ ತೇಲಾಡುತ್ತಿವೆ. ಮಾಜಿ ಕಾರ್ಪೊರೇಟರ್ ಮಾತ್ರ ಕೇವಲ ಭರವಸೆ ನೀಡಿ ಮತ ಹಾಕಿಸಿಕೊಂಡು ಹೋಗಿದ್ದಾರೆ. ಆದರೆ ಇಲ್ಲಿನ ಸಮಸ್ಯೆಗಳಿಗೆ ಮಾತ್ರ ಮುಕ್ತಿ ನೀಡಿಲ್ಲಾ ಎಂದು ವಾರ್ಡ್ ನಂಬರ 54 ರ ಜನರ ಆಕ್ರೋಶವಾಗಿದೆ. ಅಷ್ಟಕ್ಕೂ ಅಲ್ಲಿನ ಮಾಜಿ ಕಾರ್ಪೊರೇಟರ್ ಮತ್ತು ಪಾಲಿಕೆ ಅಧಿಕಾರಿಗಳು ಏನೆಲ್ಲಾ ಮಾಡಿದ್ದಾರೆ ಎಂಬುದನ್ನು ಅದೇ ಜನರಿಂದಲೇ ಕೇಳಿ....
ಹೌದು,,,, ಇಷ್ಟೆಲ್ಲಾ ಸಮಸ್ಯೆಗಳನ್ನು ಅನುಭವಿಸಿದ 54 ನೇ ವಾರ್ಡಿನ ಜನರು, ತಮ್ಮ ಸೇವೆ ಮಾಡುವ ಒಬ್ಬ ಒಳ್ಳೆಯ ಜನಸೇವಕಿಯನ್ನು ತಾವೇ ಆಯ್ಕೆ ಮಾಡಿಕೊಂಡಿದ್ದಾರೆ.
ಪರೋಪಕಾರಾರ್ಥಂ ಇದಂ ಶರೀರಂ ಎಂಬ ಮಾತಿನ ತಾತ್ಪರ್ಯವನ್ನು ಅರ್ಥ ಮಾಡಿಕೊಂಡು, ಅದನ್ನು ಬದುಕಲ್ಲಿ ಅಳವಡಿಸಿಕೊಂಡು ನಡೆಯುತ್ತಿರುವುವವರಲ್ಲಿ ಹುಬ್ಬಳ್ಳಿ ಶಿವಪುರ ಕಾಲೋನಿಯ ನಿವಾಸಿ ಶ್ಯಾಮಲಾ ಸುರೇಶ ಶೇಟ್ ಅವರು. ಸಂಕಷ್ಟದ ಜನರ ಕಣ್ಣೀರು ಒರೆಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಭರವಸೆಯ ಯುವನಾಯಕಿ ಎನಿಸಿಕೊಂಡಿದ್ದಾರೆ.
ಸಮಾಜ ಸೇವಕರಾದ ಸುರೇಶ ಶೇಟ್ ಅವರ ಪತ್ನಿಯಾದ ಶ್ಯಾಮಲಾ ಶೇಟ್, ತಮ್ಮ ಪತಿ ಮಾರ್ಗದರ್ಶನದಲ್ಲಿ ಮುನ್ನಡೆದವರು. ಸಾಮಾಜಿಕ ಕಳಕಳಿಯನ್ನು ಉಸಿರಾಗಿಸಿಕೊಂಡು ಬಡ ಮಕ್ಕಳ ಶಿಕ್ಷಣ, ಆರ್ಥಿಕ ದುರ್ಬಲರ ಆರೋಗ್ಯ, ಧಾರ್ಮಿಕ ಸೇವೆಗಾಗಿ ತನು, ಮನ, ಧನದಿಂದ ಸಹಾಯ ಮಾಡುತ್ತಾ ಬಂದಿದ್ದಾರೆ.
ಇನ್ನು ಇವರ ಪತಿ ದಿ. ಸುರೇಶ ಶೇಟ್ ಒಬ್ಬ ಯಶಸ್ವಿ ಉದ್ಯಮಿಯಾಗಿದ್ದು, ಗೋಕುಲ ರಸ್ತೆಯ ಶಿವಪುರ ಕಾಲನಿಯಲ್ಲಿ ಬೃಹತ್ ಶಿವನ ಮೂರ್ತಿ ಕಟ್ಟಿಸಿದ್ದಾರೆ. ಅಲ್ಲದೇ ಹಲವಾರು ಸಾಮಾಜಿಕ ಕಾರ್ಯಗಳಿಂದ ಗುರುತಿಸಿಕೊಂಡಿದ್ದಾರೆ. ಅವರ ಹಾದಿಯಲ್ಲಿಯೇ ಶ್ಯಾಮಲಾ ಸುರೇಶ ಶೇಟ್ ಅನಾಥ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ನೀಡುತ್ತಲಿದ್ದಾರೆ. ಇದೀಗ ಜನರ ಒತ್ತಾಸೆಯ ಮೇರೆಗೆ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ -2021 ರಲ್ಲಿ ವಾರ್ಡ್ ನಂಬರ್ 54 ರಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಈ ಮೂಲಕ ತಮ್ಮ ವಾರ್ಡಿನ್ನು ಹು-ಧಾ ಮಹಾನಗರದಲ್ಲಿ ಮಾದರಿ ವಾರ್ಡ ಮಾಡುವ ಮೂಲಕ ತಮ್ಮ ವಾರ್ಡ್ ನಿವಾಸಿಗಳ ನಂಬಿಕೆ ಉಳಿಸಿಕೊಳ್ಳುವ ಶಪಥ ಮಾಡಿದ್ದಾರೆ.
ರಾಷ್ಟ್ರೀಯ ಪಕ್ಷಗಳೆಂದು ಹೇಳಿಕೊಳ್ಳುವ ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷಗಳು ಹುಬ್ಬಳ್ಳಿ ನಗರದ ಅಭಿವೃದ್ಧಿಗಾಗಿ ಕಿಂಚಿತ್ತೂ ಕಾಳಜಿ ವಹಿಸಿಲ್ಲ, ಅಭಿವೃದ್ಧಿ ಮರೀಚಿಕೆಯಾಗಿದೆ. ಪಕ್ಷವನ್ನು ನೋಡಿ ಮತ ನೀಡಬೇಡಿ ಬದಲು ವಾರ್ಡಿನ ಅಭಿವೃದ್ಧಿಗೆ ಶ್ರಮಿಸುವುದಾಗಿ ಪಣತೊಟ್ಟ ಇಂತವರ ಪರ ನಾವಿದ್ದೆವೆಂದು ಅಲ್ಲಿನ ಜನರ ಮಾತಾಗಿದೆ.
ಅಭಿವೃದ್ಧಿಯನ್ನೇ ಕಾಣದ ವಾರ್ಡ್ ಜನ ಪಡುತ್ತಿರುವ ಬವಣೆ ವರ್ಣಿಸಲು ಸಾಧ್ಯವಿಲ್ಲ. ವಾರ್ಡಿನ ಹಿಂದಿನ ಕಾರ್ಪೊರೇಟರ್ ಸಾಧನೆ ಶೂನ್ಯ. ನಾಲಾ ತಡೆಗೋಡಿ ನಿರ್ಮಿಸಿಕೊಡಿ ಎಂದು ಪರಿಪರಿಯಾಗಿ ಬೇಡಿಕೊಂಡರೂ ಪಾಲಿಕೆ ಅಧಿಕಾರಿಗಳು ಕಣ್ಣೆತ್ತಿಯೂ ನೋಡಲಿಲ್ಲ. ಕಾರ್ಪೊರೇಟರ್ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇದರ ಪರಿಣಾಮ, ಮಳೆ ಬಂದಾಗ ಹೆಗ್ಗೇರಿ ಭಾಗ ನರಕವಾಗುತ್ತಿದೆ. ಆದರೆ ಯಾರೂ ಕೇಳುವವರಿಲ್ಲ ಎಂದು ನೊಂದ ಜನರು ಮಾಜಿ ಕಾರ್ಪೊರೇಟರ್ ವಿರುದ್ಧ ಸಿಡಿದೆದ್ದಾರೆ.
ನಿರ್ವಹಣೆ ಇಲ್ಲದ ಕಾರಣ ಶಿವನ ಮಂದಿರ ಸುತ್ತಲೂ ಹುಲ್ಲು ಕಾಂಗ್ರೆಸ್ ಕಸಬೆಳೆದು ನಿಂತಿದೆ. ನಾಲಾದ ಕೊಳಚೆ ನೀರು ಅಕ್ಕಪಕ್ಕದ ಮನೆಗಳಿಗೆ ಹಾಗೂ ಶಿವನ ಮಂದಿರದ ಆವರಣದಲ್ಲಿ ನಿಲ್ಲುತ್ತಿದೆ. ಒಂದೆಡೆ ಗಬ್ಬುವಾಸನೆ ಇನ್ನೊಂದೆಡೆ ವಿಪರೀತ ಸೊಳ್ಳೆಗಳ ಕಾಟ. ಇದರಿಂದ ವಾರ್ಡಿನ ಜನ ಬೇಸತ್ತು ಹೋಗಿದ್ದಾರೆ.
ಶ್ಯಾಮಲಾ ಶೇಟ್ ಅವರು ಆಯ್ಕೆಯಾಗುತ್ತಲೆ ಮೊದಲ ಕೆಲಸವೆಂದರೆ ನಾಲಾಕ್ಕೆ ತಡೆಗೋಡಿ ನಿರ್ಮಿಸಿ, ಈ ಪ್ರದೇಶವನ್ನು ಶುಚಿಯಾಗಿಡಲು ಹಗಲಿರುಳು ಶ್ರಮಿಸುತ್ತಾ ಜನ ಸೇವೆ ಮಾಡಲು ಮುಂದಾಗುವ ಕನಸು ಕಂಡಿದ್ದಾರೆ ಆದ್ದರಿಂದ ಈ ಬಾರಿ ಇವರಿಗೆ ಜನ ಸೇವೆ ಮಾಡಲು ವಾರ್ಡ್ ಜನತೆಯ ಬೆಂಬಲ ನೀಡಬೇಕು ಎಂಬುದು ಎಲ್ಲರ ಆಶಯ.
Kshetra Samachara
26/08/2021 03:11 pm