ಹುಬ್ಬಳ್ಳಿ: ಅವರು ಮಹಿಳಾ ಸಬಲೀಕರಣದ ಆಶಾಭಾವನೆ ಹೊಂದಿದ ವ್ಯಕ್ತಿ. ತೊಟ್ಟಿಲನ್ನು ತೂಗುವ ಕೈ ಎಂತಹ ಕಾರ್ಯವನ್ನು ಮಾಡುವುದಕ್ಕೂ ಸಿದ್ಧ ಎಂಬುವಂತ ಮಾತಿಗೆ ನಿದರ್ಶನ. ಭಾರತೀಯ ಜನತಾ ಪಕ್ಷದಿಂದಲೇ ತಮ್ಮನ್ನು ಗುರುತಿಸಿಕೊಂಡಿರುವ ಜನನಾಯಕಿ. ಜನರ ಸೇವೆಗೆ ಸನ್ನದ್ಧವಾಗಿ ಪಾಲಿಕೆಯ ಚುನಾವಣೆ ಅಖಾಡಕ್ಕೆ ಇಳಿದಿದ್ದಾರೆ. ಹಾಗಿದ್ದರೇ ಯಾರು ಈ ಸಾರಥಿ ಅಂತೀರಾ ಇಲ್ಲಿದೆ ನೋಡಿ ಕಂಪ್ಲಿಟ್ ಡಿಟೈಲ್ಸ್...
ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿ ಕನಸನ್ನು ಹೊತ್ತು. ಎಲ್ಲ ರಂಗದಲ್ಲಿಯೂ ಮಹಿಳೆಯರು ಸಬಲರು ಎಂಬುವುದನ್ನು ತೋರಿಸುವ ಆಶಾಭಾವನೆ ಹೊಂದಿರುವ ಸಾರಥಿಯ ಹೆಸರು ರೂಪಾ ದಯಾನಂದ ಶೆಟ್ಟಿ. ಈ ಬಾರಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಾರ್ಡ್ ನಂಬರ 47ರ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿದಿದ್ದಾರೆ. ಹೌದು.. ಸಂಘಟನಾತ್ಮಕ ಕೌಶಲ್ಯ, ಕಷ್ಟಗಳಿಗೆ ಸ್ಪಂದಿಸುವ ಸಹೃದಯತೆ, ಪಕ್ಷ ನಿಷ್ಠೆ, ದಕ್ಷತೆಯನ್ನು ಗುರುತಿಸಿ ರೂಪಾ ದಯಾನಂದ ಶೆಟ್ಟಿ ಅವರಿಗೆ ಭಾರತೀಯ ಜನತಾ ಪಕ್ಷ ಈ ಬಾರಿಗೆ 47 ನೇ ವಾರ್ಡಿನಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದೆ. ಇನ್ನೂ ಹತ್ತು ಹಲವಾರು ಜನಪರ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ರೂಪಾ ದಯಾನಂದ ಶೆಟ್ಟಿ ಜನರ ಸೇವೆಗೆ ಮತ್ತೊಂದು ಅವಕಾಶಕ್ಕೆ ಕಾಯುತ್ತಿದ್ದಾರೆ.
ಬಿಎ ಸೈಕಾಲಜಿ ಪದವೀಧರೆಯಾದ ರೂಪಾ ದಯಾನಂದ ಶೆಟ್ಟಿ ಅವರು,ಸ್ಮಾಲ್ ಸ್ಕೇಲ್ ಇಂಡಸ್ಟ್ರೀಸ್ ಮೂಲಕ ಸಾಕಷ್ಟು ಮಹಿಳೆಯರ ಸ್ವಾವಲಂಬನೆ ಬದುಕಿಗೆ ಆಧಾರವಾಗಿದ್ದವರು. ಇನ್ನೂ ಮಹಿಳೆಯರಿಗೂ ಸದೃಢ ಕಾಯ ಸದೃಢ ಮನಸ್ಸಿನೊಂದಿಗೆ ಸದೃಢ ಆರೋಗ್ಯವನ್ನು ಪಡೆದುಕೊಳ್ಳಲು ಮಹಿಳೆಯರಿಗಾಗಿ ಜೀಮ್ ತೆರೆದು ಆರೋಗ್ಯದ ಬಗ್ಗೆ ಕೂಡ ಸಾಕಷ್ಟು ಜಾಗೃತಿ ಮೂಡಿಸಿದ್ದಾರೆ. ಇನ್ನೂ ಮೂಲಭೂತ ಸಮಸ್ಯೆಗಳನ್ನು ಅನುಭವಿಸಿರುವ ಅವರು, ಬದಲಾವಣೆ ನಮ್ಮಿಂದಾಗಲಿ.
ನಮ್ಮ ಸಮಸ್ಯೆಗಳನ್ನು ನಾವೇ ಬಗೆಹರಿಸುವ ಸದುದ್ದೇಶದಿಂದ ರಾಜಕೀಯ ರಂಗ ಪ್ರವೇಶಿಸಿರುವ ಇವರು ಜನರ ಸೇವೆ ಮಾಡಲು ಅವಕಾಶ ಕೋರಿದ್ದಾರೆ.
ಧಾರವಾಡ ಜಿಲ್ಲೆಯ ರಾಜಕೀಯ ರಂಗದಲ್ಲಿ ಭಾರತೀಯ ಜನತಾ ಪಕ್ಷದಲ್ಲಿ ಸಾಕಷ್ಟು ಸಕ್ರಿಯರಾಗಿ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಹು-ಧಾ ಮಹಾನಗರ ಸೆಂಟ್ರಲ್ ಕ್ಷೇತ್ರದ ಮಹಿಳಾ ಮೋರ್ಚಾದ ಅಧ್ಯಕ್ಷರಾಗಿ ಕೂಡ ಮಹಿಳಾ ಸಹಭಾಗಿತ್ವದ ಶಕ್ತಿಯನ್ನು ಎತ್ತಿ ತೋರಿಸಿರುವ ಹೆಮ್ಮೆಯ ಜನನಾಯಕಿ. ಇನ್ನೂ ಜನಶಕ್ತಿಯೇ ತನ್ನ ಶಕ್ತಿ ಎಂದುಕೊಂಡಿರುವ ರೂಪಾ ದಯಾನಂದ ಶೆಟ್ಟಿ ಅವರನ್ನು ಜನರು ಪ್ರೋತ್ಸಾಹಿಸುವ ಭರವಸೆಯನ್ನು ಕೊಟ್ಟಿದ್ದಾರೆ.
ಇನ್ನೂ ವಾರ್ಡ್ ನಂಬರ 47 ಅನ್ನು ಮಾದರಿಯ ವಾರ್ಡ್ ಆಗಿ ಮತ್ತಷ್ಟು ಅಭಿವೃದ್ಧಿ ಕಾರ್ಯ ಮಾಡುವ ಸದುದ್ದೇಶದಿಂದ ಈ ಬಾರಿ ಚುನಾವಣೆಗೆ ನಿಂತಿರುವ ರೂಪಾ ದಯಾನಂದ ಶೆಟ್ಟಿ ಅವರಿಗೆ ಜನರು ಒಂದು ಸುವರ್ಣ ಅವಕಾಶ ಕಲ್ಪಿಸಿ. ಅಭಿವೃದ್ಧಿಗೆ ಅಡಿಪಾಯ ಹಾಕಲಿ ಎಂಬುವುದು ನಮ್ಮ ಆಶಯ...
Kshetra Samachara
26/08/2021 10:37 am