ಹುಬ್ಬಳ್ಳಿ: ಅವರು ಸಾರ್ವಜನಿಕರ ಸೇವೆಯನ್ನು ಮಾಡಲು ಪಣತೊಟ್ಟ ದಂಪತಿ. ಜನರ ಸಮಸ್ಯೆಯನ್ನು ಮನೆಯ ಸಮಸ್ಯೆಯಂತೇ ತಕ್ಷಣವೇ ಕಾರ್ಯಪ್ರವೃತ್ತರಾಗುವ ಸಹೃದಯಿಗಳು. ಜನರ ಆಶೀರ್ವಾದವೇ ಶ್ರೀರಕ್ಷೆ ಎಂದು ಭಾವಿಸಿರುವ ದಂಪತಿ. ಈ ಬಾರಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ 62ನೇ ವಾರ್ಡಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿದಿದ್ದಾರೆ. ಹಾಗಿದ್ದರೇ ಯಾರು ಆ ದಂಪತಿ ಅಂತೀರಾ ಇಲ್ಲಿದೆ ನೋಡಿ ಕಂಪ್ಲಿಟ್ ಡಿಟೈಲ್ಸ್..
ಸಾರ್ವಜನಿಕರ ಸೇವೆಯನ್ನು ಮಾಡಲು ಅಧಿಕಾರವೇ ಬೇಕು ಅಂತ ಏನಿಲ್ಲಾ. ಮಾಡುವ ಮನಸ್ಸಿದ್ದರೇ ಸಾಕು ಎಂತಹದ್ದೇ ಕಾರ್ಯಕ್ಕೂ ಕೈ ಜೋಡಿಸಬಹುದು. ಹೌದು ಇಂತಹ ಸಿದ್ಧಾಂತಗಳನ್ನೇ ಮೈಗೂಡಿಸಿಕೊಂಡಿರುವ ಶರೀಫ್ ಅದವಾನಿ ಹಾಗೂ ಅವರ ಪತ್ನಿ ಸರತಾಜ್ ಅದ್ವಾನಿ ಅವರು, ಯಾರೇ ಸಂಕಷ್ಟದಲ್ಲಿದ್ದರೂ ಕೂಡ ತಕ್ಷಣವೇ ಸ್ಪಂದಿಸುವ ಹೃದಯವಂತರು. ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ಜನಪರ ಕಾರ್ಯಗಳನ್ನು ಮಾಡುವ ಮೂಲಕ ತಮ್ಮನ್ನು ಗುರುತಿಸಿಕೊಂಡಿರುವ ಶರೀಫ್ ಅದವಾನಿಯವರು ಕೈಯಲ್ಲಿ ಅಧಿಕಾರ ಇಲ್ಲದಿದ್ದರೂ ಅಚ್ಚಳಿಯದೆ ಉಳಿಯುವಂತ ಕಾರ್ಯವನ್ನು ಮಾಡಿದ್ದಾರೆ.
ಇವರ ಅಭಿವೃದ್ಧಿ ಕಾರ್ಯಗಳೇ ಇವರ ವ್ಯಕ್ತಿತ್ವಕ್ಕೆ ಕೈಗನ್ನಡಿಯಾಗಿದೆ. ಶಾಸಕ ಪ್ರಸಾದ್ ಅಬ್ಬಯ್ಯ ಅವರ ನೇತೃತ್ವದಲ್ಲಿ ಸಾಕಷ್ಟು ಅನುದಾನವನ್ನು ವಾರ್ಡಿಗೆ ತಂದಿರುವ ಶರೀಫ್ ಅವರು ಜನರ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಿ ಬಗೆಹರಿಸಿದ್ದಾರೆ.
ರಸ್ತೆ, ಕುಡಿಯುವ ನೀರಿನ ಸಮಸ್ಯೆ, ಬೀದಿ ದೀಪದ ಸಮಸ್ಯೆ ಹಾಗೂ ಇನ್ನಿತರ ಯಾವುದೇ ಸಾರ್ವಜನಿಕ ಸಮಸ್ಯೆಗಳಿದ್ದರೂ ಅದನ್ನು ಸರಿಪಡಿಸುವ ಕಾರ್ಯವನ್ನು ಶರೀಫ್ ಅವರು ಮಾಡುತ್ತಾ ಬಂದಿದ್ದು, ಇವರ ಕಾರ್ಯವನ್ನು ಗುರುತಿಸಿದ ಕಾಂಗ್ರೆಸ್ ಪಕ್ಷ ಈಗ ವಾರ್ಡ್ ನಂಬರ 62ರಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿದೆ. ಪಕ್ಷ ಹಾಗೂ ಜನರು ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುವ ಭರವಸೆಯನ್ನು ದಂಪತಿ ವ್ಯಕ್ತಪಡಿಸಿದ್ದಾರೆ.
ಶ್ರೀಮತಿ ಸರತಾಜ್ ಅದವಾನಿ ಅವರು, ಗೃಹಿಣಿಯಾಗಿದ್ದರೂ ಮನೆಗೆ ಯಾರೇ ಸಹಾಯ ಕೇಳಿ ಬಂದರೂ ಇಲ್ಲ ಎನ್ನದೇ ತಮ್ಮ ಪತಿಯ ಗಮನಕ್ಕೆ ತಂದು ಕೂಡಲೇ ಅವರಿಗೆ ಸಹಾಯ ಮಾಡುವ ಸಹೃದಯಿ ಹೆಣ್ಣುಮಗಳು. ಹಸಿದವರಿಗೆ ಅನ್ನದಾನ, ಆರ್ಥಿಕ ಸಹಾಯ, ನೆರೆ ಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಇವರು ವಾರ್ಡ್ ನಂಬರ 62ರಲ್ಲಿ ಮನೆಯ ಮಗಳಾಗಿ ಗುರುತಿಸಿಕೊಂಡಿದ್ದಾರೆ. ಇನ್ನೂ ಅಮೂಲ್ಯವಾದ ಮತವನ್ನು ನೀಡಿ ಒಂದು ಅವಕಾಶಕ್ಕೆ ಮನವಿ ಮಾಡುತ್ತಿದ್ದಾರೆ.
ಇನ್ನೂ ದಂಪತಿ ಸಹಾಯದ ಹಸ್ತವನ್ನು ಅರಿತ ಜನರು ಕೂಡ ಅದವಾನಿ ದಂಪತಿಗೆ ಪಾಲಿಕೆ ಚುನಾವಣೆಯಲ್ಲಿ ಬೆಂಬಲ ನೀಡಿ ಪ್ರಚಂಡ ಬಹುಮತದಿಂದ ಆಯ್ಕೆ ಮಾಡುವ ಭರವಸೆ ನೀಡಿದ್ದಾರೆ.
ಒಟ್ಟಿನಲ್ಲಿ ಜನರ ಆಶೀರ್ವಾದದಿಂದಲೇ ಜನನಾಯಕರಾಗಿ ಮನೆಯ ಮಕ್ಕಳಂತೆ ಎಲ್ಲರ ಸುಖ ದುಃಖಗಳಲ್ಲಿ ಭಾಗಿಯಾಗುವ ಅದವಾನಿ ದಂಪತಿಯ ಕಾರ್ಯಕ್ಕೆ ಜನರು ಸಾಕಷ್ಟು ಬೆಂಬಲ ನೀಡುತ್ತಿದ್ದು, ಜನರ ಆಶೀರ್ವಾದೊಂದಿಗೆ ವಿಜಯದ ಪತಾಕೆ ಹಾರಿಸಲಿ ಎಂಬುವುದು ವಾರ್ಡಿನ ಜನರ ಆಶಯ...
Kshetra Samachara
26/08/2021 10:22 am