ಹುಬ್ಬಳ್ಳಿ: ಇವರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಯನ್ನು ಪ್ರತಿಯೊಬ್ಬರ ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ. ಈಗ ಮತ್ತಷ್ಟು ಸೇವೆಯನ್ನು ಜನರಿಗೆ ತಲುಪಿಸಲು ಮತ್ತೊಂದು ಅವಕಾಶಕ್ಕಾಗಿ ಜನರ ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ. ಈ ಬಾರಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ 40ನೇ ವಾರ್ಡಿನ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಹಾಗಿದ್ದರೇ ಯಾರು ಆ ಜನನಾಯಕ ಅಂತೀರಾ ಇಲ್ಲಿದೆ ನೋಡಿ ಜನನಾಯಕನ ಸ್ಟೋರಿ..
ಗೋಪನಕೊಪ್ಪ ಅಂದರೆ ಅದು ಯಾವುದೋ ಹಳ್ಳಿ ಇರಬೇಕು ಎಂದುಕೊಂಡಿದ್ದವರಿಗೆ ಯಾವ ದಾರಿ ಹಳ್ಳಿಯಿಂದ ಪಟ್ಟಣಕ್ಕೆ ಹೋಗುತ್ತದೆಯೋ ಅದೇ ದಾರಿ ಪಟ್ಟಣದಿಂದ ಹಳ್ಳಿಗೂ ಬರುತ್ತದೆ ಎಂಬುವಂತೇ ಅಭಿವೃದ್ಧಿ ಕಾರ್ಯಗಳ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ ಕಾಯಕ ಯೋಗಿಯೇ ಈಶ್ವರಗೌಡ ಪಾಟೀಲ. ಈ ಬಾರಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 40ನೇ ವಾರ್ಡಿನಿಂದ ಸ್ಪರ್ಧಿಸುವ ಮೂಲಕ ಜನರ ಸೇವೆಗೆ ಅವಕಾಶ ಕೇಳುತ್ತಿದ್ದಾರೆ.
ಸಾಕಷ್ಟು ಅಭಿವೃದ್ಧಿ ಕಾರ್ಯಗಳ ಮೂಲಕ ತಮ್ಮನ್ನು ಗುರುತಿಸಿಕೊಂಡಿರುವ ಈಶ್ವರಗೌಡ ಪಾಟೀಲ ಅವರು, ಕೈಯಲ್ಲಿ ಅಧಿಕಾರವಿಲ್ಲದಿದ್ದರೂ ಯಾವುದೇ ಸಹಾಯಕ್ಕೂ ಹಿಂಜರಿಯದೇ ಮುಂದೆ ಬರುವ ಇವರು ವಾರ್ಡ್ ನಂಬರ 40ರ ಕಮಲ ಪಡೆಯ ಅಭ್ಯರ್ಥಿಯಾಗಿದ್ದಾರೆ. ಹಾಗಿದ್ದರೇ ಅವರ ಕಾರ್ಯಗಳ ಬಗ್ಗೆ ಅವರ ಬಾಯಿಂದಲೇ ಕೇಳಿ..
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರೇರಣೆ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾರ್ಗದರ್ಶನದಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಾಗಿ ಈಶ್ವರಗೌಡ ಪಾಟೀಲ ಅವರು ಸಾಕಷ್ಟು ಕಾರ್ಯವನ್ನು ಮಾಡಿದ್ದಾರೆ. ರಸ್ತೆ ನಿರ್ಮಾಣ, ಶಾಲೆ ನಿರ್ಮಾಣ, ಕಟ್ಟಡ ದುರಸ್ತಿ, ಸಾರ್ವಜನಿಕ ಸಮಸ್ಯೆಗೆ ಧ್ವನಿಯಾಗಿರುವ ಇವರು ಸಾಕಷ್ಟು ಜನಮನ್ನಣೆ ಪಡೆದ ಜನನಾಯಕ.
ಪಶು ಆಸ್ಪತ್ರೆಗೆ 40 ಲಕ್ಷ ಅನುದಾನ, ಸ್ಮಶಾನಕ ಕಾಂಪೌಂಡ್ 15 ಲಕ್ಷ ಅನುದಾನವನ್ನು ಹೀಗೆ ಕೇಂದ್ರ ಹಾಗೂ ರಾಜ್ಯ ಸಚಿವರಿಂದ ಪಡೆದು ಅಭಿವೃದ್ಧಿ ಕಾರ್ಯವನ್ನು ಮಾಡುವ ಮೂಲಕ ನಿಸ್ವಾರ್ಥ ಸೇವೆಯ ಜನನಾಯಕ ಎಂದು ಬಿಂಬಿತರಾಗಿದ್ದಾರೆ. ಇನ್ನೂ ಸ್ವಚ್ಚತೆ ಹೆಚ್ಚಿನ ಆದ್ಯತೆ ನೀಡುವ ಇವರು, ಸುಲಭ ಶೌಚಾಲಯದ ದುರಸ್ತಿ, ಬಯಲು ಶೌಚ ಮುಕ್ತ ಪರಿಸರ ನಿರ್ಮಾಣದಲ್ಲಿ ಯಶಸ್ಸು ಸಾಧಿಸಿದ್ದಾರೆ. ಭಾರತೀಯ ಜನತಾ ಪಕ್ಷದ ಹು-ಧಾ ಮಹಾನಗರ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರಾಗಿ ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಕೀರ್ತಿ ಈಶ್ವರಗೌಡ ಪಾಟೀಲ ಅವರಿಗೆ ಸಲ್ಲುತ್ತದೆ. ಈ ಬಾರಿ ಜನರು ಕೂಡ ಆಶೀರ್ವಾದ ಮಾಡುವ ಭರವಸೆಯನ್ನು ನೀಡಿದ್ದಾರೆ.
ಇನ್ನು ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ಶ್ರಮವಹಿಸಿದ ಈಶ್ವರಗೌಡ ಪಾಟೀಲ ಅವರ ಪಕ್ಷ ನಿಷ್ಠೆ, ನಾಯಕತ್ವ ಗುಣ, ಸಹೃದಯತೆಯನ್ನು ಮೆಚ್ಚಿ ಭಾರತೀಯ ಜನತಾ ಪಕ್ಷ ಟಿಕೆಟ್ ನೀಡಿದ್ದು, ಈ ಬಾರಿ ಚುನಾವಣೆಯಲ್ಲಿ ಜಯಭೇರಿ ಬಾರಿಸುವ ಮೂಲಕ ಜನರ ಸೇವೆಗೆ ಮತ್ತೊಂದು ಅವಕಾಶ ನೀಡಲಿ ಎಂದು ಆಶಿಸೋಣ.
Kshetra Samachara
25/08/2021 10:02 am