ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಗಂಡು ಮೆಟ್ಟಿನ ನಾಡಿನ ಬಗ್ಗೆ ಸಿಎಂ ಪ್ರೇಮ: ಹುಬ್ಬಳ್ಳಿ ಆಗುತ್ತದೆ ಕೈಗಾರಿಕಾ ಹಬ್‌...!

ಹುಬ್ಬಳ್ಳಿ: ಸಿಎಂ ಆದ ಮೇಲೆ ಮೊದಲ ಬಾರಿಗೆ ತಮ್ಮ ನಿವಾಸಕ್ಕೆ ಬಸವರಾಜ ಬೊಮ್ಮಾಯಿ ಆಗಮನ ಆಗಿದೆ. ಗಂಡು ಮೆಟ್ಟಿದ ನಾಡಿನ ಬಗ್ಗೆ ಅಪಾರ ಕಾಳಜಿ ಹೊಂದಿರುವ ಸಿಎಂ ಹುಬ್ಬಳ್ಳಿ ಬಗ್ಗೆ ಹುಬ್ಬಳ್ಳಿ ಅಭಿವೃದ್ಧಿ ಬಗ್ಗೆ ಈಗಾಗಲೇ ಚಿಂತನೆ ನಡೆಸಿದ್ದಾರೆ. ಹುಬ್ಬಳ್ಳಿ ವಿಸಿಟ್ ನಲ್ಲಿರುವ ಸಿಎಂ ಏನೆಲ್ಲಾ ಮಾತನಾಡಿದರೂ ಗೊತ್ತಾ...? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್..

ನಿನ್ನೆ ಸಂಜೆ ಬೆಳಗಾವಿಯಿಂದ ನೇರವಾಗಿ ಹುಬ್ಬಳ್ಳಿಯ ತಮ್ಮ ಸ್ವಗೃಹಕ್ಕೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ ಜನರ ಅಶೋತ್ತರಗಳಿಗೆ ಸ್ಪಂದಿಸಿದರು. ಇಳಿಸಂಜೆಯ ಹೊತ್ತಲ್ಲೂ ಸಿಎಂ ನೋಡಲು ಜನರ ದಂಡು ಹುಬ್ಬಳ್ಳಿಯ ಆದರ್ಶ ನಗರದ ನಿವಾಸದ ಎದುರು ನೆರೆದಿತ್ತು. ಈ ವೇಳೆಯಲ್ಲಿ ಕೆಲ ಕಾಲ ವಿಶ್ರಾಂತಿ ಪಡೆಯಬೇಕು ಎಂದುಕೊಂಡಿದ್ದ ಸಿಎಂ ಗೆ ಜನರ ದಂಡು ಅವರನ್ನು ಹೊರಬಂದು ಅಹವಾಲು ಕೇಳುವಂತೆ ಮಾಡಿತು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ನಾನು ರಾಜ್ಯಕ್ಕೆ ಸಿಎಂ ಇದ್ದರೂ ಸಹ ಹುಬ್ಬಳ್ಳಿಯವನು ಎನ್ನುವ ಮೂಲಕ ಗಂಡು ಮೆಟ್ಟಿದ ನಾಡಿನ ಬಗೆಗಿನ ಪ್ರೇಮವನ್ನ ಸಾರಿದರು.

ಸಿಎಂ ಹುಬ್ಬಳ್ಳಿಯನ್ನು ಕೈಗಾರಿಕಾ ಹಬ್ ಮಾಡುವ ಜೊತೆಗೆ ತಮ್ಮ ನೆಚ್ಚಿನವರನ್ನು ಸಹ ನೆನೆದರು. ಇನ್ನೂ ರಾಜ್ಯ ರಾಜಕಾರಣ ಬಗ್ಗೆ ಹೆಚ್ಚಾಗಿ ಮಾತನಾಡದ ಸಿಎಂ ಮುಂದಿನ ದಿನಗಳಲ್ಲಿ ಉಸ್ತುವಾರಿ ನೇಮಕದ ಬಗ್ಗೆ ಮಾತನಾಡಿದ್ರು. ಅಲ್ಲದೆ ಈಗಾಗಲೇ ರೇಬಲ್ ಆಗಿರುವ ಆನಂದ್ ಸಿಂಗ್ ಮುನಿಸಿನ ಬಗ್ಗೆ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು ನನ್ನ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಅವರ ಜೊತೆ ಮಾತನಾಡಿತ್ತೇನೆ ಅಂತಲೂ ಹೇಳಿದರು.

ಸಿಎಂ ಆಗಮಿಸುತ್ತಿದ್ದಂತೆ ಸುದ್ದಿ ತಿಳಿದ ಜನರು ತಂಡೋಪತಂಡವಾಗಿ ಸಿಎಂ ನಿವಾಸದತ್ತ ಆಗಮಿಸಿದರು. ಈ ವೇಳೆ ಪೊಲೀಸರು ಎಷ್ಟೇ ಜನರನ್ನು ಹತೋಟಿಗೆ ತರುವ ಪ್ರಯತ್ನ ಮಾಡಿದರು ಸಹ ಅದು ಪ್ರಯೋಜನವಾಗಲಿಲ್ಲ..ಜನರ ಗುಂಪು ಹೆಚ್ಚಾದ ವೇಳೆ ಖುದ್ದು ಸಿಎಂ ಹೊರಗೆ ಬಂದು ಜನರ ಅಹವಾಲು ಸ್ವೀಕರಿಸಿದ್ರು. ಅಲ್ಲದೆ ರಾಜ್ಯವ್ಯಾಪಿ ನೈಟ್ ಕರ್ಫ್ಯೂ ಜಾರಿ ಇದ್ದರು ಸಹ ಸಿಎಂ ಅದಕ್ಕೆ ಡೋಂಟ್ ಕೇರ್ ಎನ್ನದೆ 9 ಗಂಟೆ ಮೇಲೂ ಸಹ ಅಹವಾಲು ಸ್ವೀಕರಿಸಿ ನಂತರ ಖಾಸಗಿ ಹೋಟೆಲ್ ಗೆ ಊಟಕ್ಕೆ ತೆರಳಿದರು.

ಒಟ್ಟಾರೆ ಸಿಎಂ ಹುಬ್ಬಳ್ಳಿ ಭೇಟಿ ಹಲವು ಅಭಿವೃದ್ಧಿ ಜೊತೆಗೆ ಪಾಲಿಕೆ ಚುನಾವಣೆಯ ಚರ್ಚೆಗೂ ಸಹ ಕಾರಣವಾಗಿದ್ದು, ಶಾಸಕ ಅರವಿಂದ್ ಬೆಲ್ಲದ್ ಸೇರಿದಂತೆ ಟಿಕೆಟ್ ಆಕಾಂಕ್ಷಿಗಳು ಸಹ ಬಸವರಾಜ ಬೊಮ್ಮಾಯಿ ಭೇಟಿ ಮಾಡಿ ಲಾಭಿ ಮಾಡಿದ್ದು ಮುಂದಿನ ರಾಜಕೀಯ ಚಟುವಟಿಕೆ ಹೇಗಿರಲಿದೆ ಅನ್ನೋದನ್ನ ಕಾದು ನೋಡಬೇಕಿದೆ.

Edited By : Manjunath H D
Kshetra Samachara

Kshetra Samachara

22/08/2021 11:10 am

Cinque Terre

44.34 K

Cinque Terre

8

ಸಂಬಂಧಿತ ಸುದ್ದಿ