ಧಾರವಾಡ: ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಸೆ.3 ರಂದು ನಡೆಯಲಿದ್ದು, ಮೊನ್ನೆಯಷ್ಟೇ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ ಬಿಜೆಪಿ. ಇದೀಗ ಅಳೆದು ತೂಗಿ 15 ಜನರನ್ನೊಳಗೊಂಡ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಇದೀಗ ಒಟ್ಟಾರೆಯಾಗಿ ಬಿಜೆಪಿ 41 ಜನರಿಗೆ ಟಿಕೆಟ್ ಹಂಚಿಕೆ ಮಾಡಿದೆ.
ಹುಬ್ಬಳ್ಳಿ, ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಹಿರಿಯ ಮುಖಂಡ ಸಿದ್ದು ಮೊಗಲಿ ಶೆಟ್ಟರ್ ಪತ್ನಿ ಸೀಮಾ ಮೊಗಲಿ ಶೆಟ್ಟರ್ (39), ಕ್ಷೇತ್ರದ ಅಧ್ಯಕ್ಷ ಸಂತೋಷ ಚೌಹಾಣ(41), ಪ್ರದೀಪ ಶೆಟ್ಟರ್ ಬಲಗೈ ಬಂಟ ಮಣಿಕಂಠ ಶ್ಯಾಗೋಟಿ (45), ಉಮಾ ಮುಕುಂದ (44), ವೀಣಾ ಚೇತನ ಭರದ್ವಾಡ (49), ಶ್ವೇತಾ ರಾಯನಗೌಡರ(59) ಇವರಿಗೆ ಬಿಜೆಪಿ ಟಿಕೆಟ್ ಅಂತಿಮಗೊಳಿಸಿದೆ.
ಪೂರ್ವ ಕ್ಷೇತ್ರದಲ್ಲಿ ಅನೂಪ್ ಬಿಜವಾಡ (61), ಮಲ್ಲಪ್ಪ ಶಿರಕೋಳ (62), ರುಕ್ಮಿಣಿ ಶೆಜವಾಡಕರ (64), ಜಶ್ವಂತ ಜಾಧವ (69), ಮಂಜುನಾಥ ಬಿಜವಾಡ(81), ಶಾಂತಾ ಹೊನ್ನಪ್ಪ ಕೋಗೊಡ (82) ಅಲ್ಲದೇ 77ನೇ ವಾರ್ಡಿನಿಂದ ಸ್ವಲೇಹಾ ಝಕ್ರಿಯಾ ಹೊಸೂರಗೆ ಟಿಕೆಟ್ ಖಚಿತವಾಗಿದೆ.
ಮುಸ್ಲಿಂ ಮಹಿಳೆಗೆ ಮಣೆ:
ಬಿಜೆಪಿಯಿಂದ ಮೊದಲ ಬಾರಿಗೆ ಮುಸ್ಲಿಂ ಅಭ್ಯರ್ಥಿಯೊಬ್ಬರಿಗೆ ಮಣೆ ಹಾಕಲಾಗಿದೆ. ಒಬಿಸಿ ಎ ಸಮುದಾಯಕ್ಕೆ ಮೀಸಲಾದ 77ನೇ ವಾರ್ಡಿನಲ್ಲಿ ಸ್ವಲೇಹಾ ಝಕ್ರಿಯಾ ಹೊಸೂರ ಎಂಬುವವರು ಕಮಲ ಹಿಡಿದು ಮತ ಯಾಚಿಸಲಿದ್ದಾರೆ.
ಇಲ್ಲಿ ಕಾಂಗ್ರೆಸ್‌ನಿಂದ ಕಿಲ್ಲೇದಾರ ಚಾಚಿ ಎಂದೇ ಖ್ಯಾತರಾಗಿರುವ ಹಿರಿಯ ಸದಸ್ಯೆ ಫೆಮಿದಾ ಕಿಲ್ಲೇದಾರ ಅವರ ಪುತ್ರಿ ಬತುಲ್ ಕಿಲ್ಲೇದಾರ ಅವರಿಗೆ ಟಿಕೆಟ್ ನೀಡಲಾಗಿದೆ.
39 ನೇ ವಾರ್ಡಿನಿಂದ ಸೀಮಾ ಮೊಗಲಿ ಶೆಟ್ಟರ್, 41ನೇ ವಾರ್ಡಿನಿಂದ ಸಂತೋಷ ಚೌಹಾಣ, 45ನೇ ವಾರ್ಡಿನಿಂದ ಮಣಿಕಂಠ ಶ್ಯಾಗೋಟಿ, 44 ರಿಂದ ಉಮಾ ಮುಕುಂದ, 49 ರಿಂದ ವೀಣಾ ಚೇತನ ಭರದ್ವಾಡ, 59 ರಿಂದ ಶ್ವೇತಾ ರಾಯನಗೌಡರ, 61 ರಿಂದ ಅನೂಪ್ ಬಿಜವಾಡ, 62 ರಿಂದ ಮಲ್ಲಪ್ಪ ಶಿರಕೋಳ, 64 ರಿಂದ ರುಕ್ಮಿಣಿ ಶೆಜವಾಡಕರ, 69 ರಿಂದ ಜಶ್ವಂತ ಜಾಧವ, 81 ರಿಂದ ಮಂಜುನಾಥ ಬಿಜವಾಡ, 82 ರಿಂದ ಶಾಂತಾ ಹೊನ್ನಪ್ಪ ಕೋಗೊಡ, 77 ರಿಂದ ಸ್ವಲೇಹಾ ಝಕ್ರಿಯಾ ಹೊಸೂರ ಅವರನ್ನು ಕಣಕ್ಕಿಳಿಸಲಾಗಿದೆ.
Kshetra Samachara
21/08/2021 04:27 pm