ಧಾರವಾಡ: ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ವಾರ್ಡ್ ನಂಬರ್ 24 ರಿಂದ ಕಣಕ್ಕಿಳಿದಿರುವ ಡಾ.ಮಯೂರ ಮೋರೆ ಅವರು ಇಂದು ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ತಮ್ಮ ತಂದೆ ಮನೋಹರ ಮೋರೆ ಸೇರಿದಂತೆ ಸೂಚಕರು ಹಾಗೂ ಅನುಮೋದಕರೊಂದಿಗೆ ಆಗಮಿಸಿದ ಡಾ.ಮಯೂರ ಅವರು ಎರಡು ನಾಮಪತ್ರಗಳನ್ನು ಪ್ರತ್ಯೇಕವಾಗಿ ಸಲ್ಲಿಸಿದರು.
ಒಂದು ಪಕ್ಷೇತರ ಅಭ್ಯರ್ಥಿಯಾಗಿ ಹಾಗೂ ಇನ್ನೊಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಕಾಂಗ್ರೆಸ್‌ನಿಂದ ಬಿ ಫಾರ್ಮ ಸಿಕ್ಕ ನಂತರ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಲಿದ್ದಾರೆ.
Kshetra Samachara
21/08/2021 03:42 pm