ಹುಬ್ಬಳ್ಳಿ: ಹೊಸಪೇಟೆ ಮತ್ತು ಐತಿಹಾಸಿಕ ಹಂಪಿ ಪ್ರವಾಸಕ್ಕೆ ಕೈಗೊಂಡಿರುವ ಉಪರಾಷ್ಟ್ರಪತಿಯವರಾದ ಎಂ.ವೆಂಕಯ್ಯನಾಯ್ಡು ಹಾಗೂ ಅವರ ಪತ್ನಿ ಎಂ.ಉಷಾ ಅವರೊಂದಿಗೆ ಇಂದು ಸಂಜೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಭಾರತೀಯ ವಾಯುಸೇನೆಯ ವಿಶೇಷ ವಿಮಾನದ ಮೂಲಕ ಆಗಮಿಸಿದರು.
ಕೇಂದ್ರ ಸಂಸದೀಯ ವ್ಯವಹಾರಗಳು,ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಪ್ರಲ್ಹಾದ ಜೋಶಿ , ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ್ ಶೆಟ್ಟರ್ ಅವರು ಶಾಲು ಹಾಕಿ ಸ್ವಾಗತಿಸಿದರು. ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತ ಲಾಬೂರಾಮ್ ಅವರು ಪುಸ್ತಕಗಳನ್ನು ನೀಡಿ ಬರಮಾಡಿಕೊಂಡರು. ಭಾರತೀಯ ವಾಯುಸೇನೆಯ ವಿಶೇಷ ಹೆಲಿಕಾಪ್ಟರ್ ಮೂಲಕ ಹೊಸಪೇಟೆಗೆ ತೆರಳಿದರು.
Kshetra Samachara
20/08/2021 05:31 pm