ಹುಬ್ಬಳ್ಳಿ : ಹೀಗೆ ಒಂದು ಕಡೆ ಆಹಾರ ಕಿಟ್, ಇನ್ನೊಂದ ಕಡೆ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿರುವ ಇವರ ಹೆಸರು ಡಾ. ವಿಜಯಕುಮಾರ್ ಎಮ್ ಅಪ್ಪಾಜಿ. ಈಗಾಗಲೇ ವಿದ್ಯಾರ್ಥಿ ದಿಸೆಯಿಂದಲೇ ಜನಪರ ಹೋರಾಟ ಮಾಡುತ್ತಾ, ಬಂದಿರುವ ಇವರು, ಕಳೆದ ಹಲವಾರು ವರ್ಷಗಳಿಂದ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿದ್ದಾರೆ.
ಜಾತಿ, ಮತ, ಧರ್ಮ ಭೇದಭಾವ ಮಾಡದೇ ಸಂಕಷ್ಟಕ್ಕೆ ಒಳಗಾದ ಜನರ ನೆರವಿಗೆ ನಿಂತು, ಅವರ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಈ ದಿಸೆಯಲ್ಲಿ ಅವರಿಗೆ ಹು-ಧಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ, ವಾರ್ಡ್ ನಂಬರ್ 28 ರಿಂದ ಬಿಜೆಪಿ ಪಕ್ಷದಿಂದ ಟಿಕೆಟ್ ನೀಡಬೇಕೆಂದು, ವಾರ್ಡ್ ನ ನಿವಾಸಿಗಳು ಒತ್ತಾಯ ಮಾಡುತ್ತಿದ್ದಾರೆ.
ಡಾ. ವಿಜಯಕುಮಾರ್ ಅಪ್ಪಾಜಿ ಒಬ್ಬ ಸಜ್ಜನ, ಉತ್ತಮ ಚಾರಿತ್ರ್ಯಿಕ ಹಿನ್ನೆಲೆ ಹೊಂದಿರುವ ವ್ಯಕ್ತಿ. ಕಳೆದ ಸುಮಾರು 20 ವರ್ಷಗಳಿಂದ ಅನೇಕ ಜನಪರ ಹೋರಾಟ, ಸಂಘಟನೆಗಳನ್ನು ಮಾಡುತ್ತಾ ಬಂದಿರುವ ಇವರು, ಕಳೆದ ಮೂವತ್ತು ವರ್ಷಗಳಿಂದ ನವನಗರದ ಪಂಚಾಕ್ಷರಿ ನಗರದ ನಿವಾಸಿಗಳಾಗಿ ಆರ್.ಎಸ್.ಎಸ್ ನ ಸಕ್ರಿಯ ಕಾರ್ಯಕರ್ತನಾಗಿ, ಹಲವಾರು ಜನಪರ ಹೋರಾಟ ಮಾಡುತ್ತಾ ಬಂದಿದ್ದಾರೆ.
ಸಾಮಾಜಿಕ ಸಾಮರಸ್ಯ ಚಟುವಟಿಕೆಗಳಲ್ಲಿ ನಿರಂತರವಾಗಿ ಪಾಲ್ಗೊಂಡಿದ್ದು ಅನೇಕ ನೈಸರ್ಗಿಕ ವಿಕೋಪಗಳು, ರಾಷ್ಟ್ರೀಯ ಕಾರ್ಯಕ್ರಮಗಳು, ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಯೋಜಿತ ಸಾಮಾಜಿಕ ಆಂದೋಲನಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡಿರುವ ಇವರು, ಲಾಕ್ ಡೌನ್ ಸಮಯದಲ್ಲಿ ಸಮಯದಲ್ಲಿ ಬಡವರಿಗೆ, ದೀನ ದಲಿತರಿಗೆ ತಮ್ಮ ಸ್ವ ಇಚ್ಛೆಯಿಂದ ಆಹಾರ ಕಿಟ್‌ಗಳನ್ನು ಪೂರೈಸಿ, ಅವರಿಗೆ ಜೀವನೋಪಾಯಕ್ಕೆ ಸಹಾಯ ಸಹಕಾರ ನೀಡುತ್ತಾ ಬಂದಿದ್ದಾರೆ. ಇವರ ಒಂದು ಕಾರ್ಯ ಹೀಗೆ ಮುಂದು ವರೆದು ಜನ ಸೇವೆ ಮಾಡಲೆಂದು ಎಲ್ಲ ಜನರ ಆಶಯವಾಗಿದೆ......
Kshetra Samachara
19/08/2021 06:13 pm