ಧಾರವಾಡ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಧಾರವಾಡಕ್ಕೆ ಆಗಮಿಸುತ್ತಿದ್ದ ವೇಳೆ ಬಿಜೆಪಿ ಯುವ ಮುಖಂಡ ನಿತಿನ್ ಇಂಡಿ ಅವರು, ಸಚಿವರ ಸ್ವಾಗತಕ್ಕಾಗಿ ಅಲ್ಲಲ್ಲಿ ಬ್ಯಾನರ್ ಕಟ್ಟಿಸಿದ್ದರು.
ಆದರೆ, ಇದರಲ್ಲಿ ಶಾಸಕರೂ ಆಗಿರುವ ಬಿಜೆಪಿ ಜಿಲ್ಲಾ ಅಧ್ಯಕ್ಷ ಅರವಿಂದ ಬೆಲ್ಲದ ಅವರ ಫೋಟೋನೇ ಇಲ್ಲ ಎಂದು ಅವರ ಬೆಂಬಲಿಗರು ನಿತಿನ್ ಇಂಡಿ ಅವರ ಬ್ಯಾನರ್‌ಗಳನ್ನು ಹರಿದು ಹಾಕಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ಬಗ್ಗೆ ಶಾಸಕ ಅರವಿಂದ ಬೆಲ್ಲದ ಕೂಡ, ಬ್ಯಾನರ್ ಹರಿಯೋದು ತಪ್ಪು ಎಂದು ಹೇಳಿಕೆ ಕೊಟ್ಟಿದ್ದರು. ಇದೀಗ ಯಾರು ಬ್ಯಾನರ್ ಹರಿದಿದ್ದರೋ ಅವರೇ ಮತ್ತೇ ಅದೇ ರೀತಿಯ ಬ್ಯಾನರ್‌ಗಳನ್ನು ಪ್ರಿಂಟ್ ಹಾಕಿಸಿ, ಅದರಲ್ಲಿ ಅರವಿಂದ ಬೆಲ್ಲದ ಅವರ ಫೋಟೋ ಕೂಡ ಹಾಕಿಸಿ ಕಟ್ಟಿದ್ದಾರೆ.
ಧಾರವಾಡದ ಟೋಲನಾಕಾ ಬಳಿ ಮೊದಲು ಕಟ್ಟಿದ್ದ ಬ್ಯಾನರ್‌ನ್ನು ಬೆಲ್ಲದ ಬೆಂಬಲಿಗರು ಹರಿದು ಹಾಕಿದ್ದರು. ಈಗ ಅದೇ ಜಾಗದಲ್ಲಿ ಅದೇ ರೀತಿಯ ಬ್ಯಾನರ್ ಮಾಡಿಸಿ ಕಟ್ಟಿದ್ದಾರೆ. ಬೆಲ್ಲದ ಬೆಂಬಲಿಗರು ಮಾಡಿಸಿರುವ ಈ ಬ್ಯಾನರ್‌ನಲ್ಲಿ ಅರವಿಂದ ಬೆಲ್ಲದ ಅವರ ಫೋಟೋ ಕೂಡ ಹಾಕಿಸಿದ್ದಾರೆ.
Kshetra Samachara
18/08/2021 06:14 pm