ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ರಾಜಕೀಯ ಸಭೆ ನಡೆಸುತ್ತೀರಾ? ಹಾಗಾದ್ರೆ ಪರವಾನಿಗಿ ಪಡೆಯಿರಿ

ಧಾರವಾಡ: ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಈಗಾಗಲೇ ಘೋಷಣೆಯಾಗಿದ್ದು, ನೀತಿ ಸಂಹಿತೆ ಕೂಡ ಜಾರಿಯಲ್ಲಿದೆ. ಈ ಮಧ್ಯೆ ರಾಜಕೀಯ ಸಭೆ, ಸಮಾರಂಭ ನಡೆಸುವುದಕ್ಕಾಗಿ ಪರವಾನಿಗಿ ಪಡೆಯುವುದು ಅವಶ್ಯ ಎಂದು ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಹೇಳಿದರು.

ಧಾರವಾಡದಲ್ಲಿ ಮಾಹಿತಿ ನೀಡಿದ ಅವರು, ರಾಜಕೀಯ ಸಭೆ, ಸಮಾರಂಭಗಳಿಗೆ ಪರವಾನಿಗಿ ಪಡೆಯುವುದಕ್ಕೋಸ್ಕರ ಏಕಗವಾಕ್ಷಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು.

ಈಗಾಗಲೇ ನಾಮಪತ್ರ ಸ್ವೀಕಾರ ಮಾಡಲು ಐದು ಕೇಂದ್ರಗಳನ್ನು ತೆರೆಯಲಾಗಿದ್ದು, ನಿನ್ನೆ ಯಾವುದೇ ನಾಮಪತ್ರಗಳು ಸಲ್ಲಿಕೆಯಾಗಿಲ್ಲ. ಅಭ್ಯರ್ಥಿಗಳು ಅರ್ಜಿ ನಮೂನೆಗಳನ್ನು ಪಡೆದುಕೊಂಡು ಹೋಗುತ್ತಿದ್ದಾರೆ ಎಂದರು.

Edited By : Shivu K
Kshetra Samachara

Kshetra Samachara

17/08/2021 01:58 pm

Cinque Terre

28.81 K

Cinque Terre

0

ಸಂಬಂಧಿತ ಸುದ್ದಿ