ಹುಬ್ಬಳ್ಳಿ: ಗಂಡು ಮೆಟ್ಟಿನ ನಾಡು ಹುಬ್ಬಳ್ಳಿ, ಹುಬ್ಬಳ್ಳಿ ಎಂದಾಕ್ಷಣ ಸಾಕು ಎಲ್ಲರಿಗೂ ನೆನಪಿಗೆ ಬರುವುದು ಚನ್ನಮ್ಮ ಸರ್ಕಲ್, ರಾಣಿ ಚನ್ನಮ್ಮ ರಾಷ್ಟ್ರದ ರಕ್ಷಣೆಗೆ ಹೋರಾಟ ಮಾಡಿದವರು, ಅವರಿಗೆ ಯಾವುದೇ ಜಾತಿ, ಭೇದ, ಧರ್ಮ, ಪಕ್ಷ ಎಂಬುದಿಲ್ಲಾ, ಆದರೆ ಇದೀಗ ಅವರಿಗೆ ಒಂದು ಪಕ್ಷಕ್ಕೆ ಸೀಮಿತ ಮಾಡಿಕೊಂಡಿದ್ದಾರಾ? ಎಂಬ ಅನುಮಾನವನ್ನು ಸಾರ್ವಜನಿಕರು ವ್ಯಕ್ತಪಡಿಸುವಂತಾಗಿದೆ.
ಹೌದು, ಇಂದು ಸ್ವಾತಂತ್ರ್ಯ ದಿನಾಚರಣೆ, ಎಲ್ಲೆಂದರಲ್ಲಿ ದೇಶದ ತ್ರಿವರ್ಣ ಧ್ವಜಗಳು ರಾರಾಜಿಸುತ್ತಿವೆ. ದೇಶಕ್ಕಾಗಿ ಹೋರಾಡಿ ಮಡಿದ ವೀರಯೋಧರ ನೆನಪಿನಲ್ಲಿ ಕಾರ್ಯಕ್ರಮ ನಡೆಯುತ್ತಿವೆ. ಚಿಕ್ಕವರಿಂದ ಹಿಡಿದು ಹಿರಿಯರ ಬಾಯಲ್ಲಿ ರಾಷ್ಟ್ರದ ಹಾಡುಗಳು ಕೇಳಿಬರುತ್ತಿದೆ. ಹೀಗಿರುವಾಗ ಚನ್ನಮ್ಮ ವೃತ್ತದ ಸುತ್ತಲೂ ಈಗ ಬಿಜೆಪಿ ಬಾವುಟಗಳು ಹಾರಾಡುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇಂದು ಅದೆಷ್ಟೋ ಹೋರಾಟಗಾರರ ತ್ಯಾಗದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ದಕ್ಕಿದೆ. ಅಂತಹ ಸಂದರ್ಭದಲ್ಲಿ ಬಿಜೆಪಿ ದೇಶಾಭಿಮಾನ ಮೂಡಿಸಬೇಕಿತು. ಅದರ ಬದಲು ಇದನ್ನೇ ಬಂಡವಾಳವಾಗಿ ಮಾಡಿಕೊಂಡು, ತಮ್ಮ ಬ್ಯಾಳಿಯನ್ನು ಬೇಯಿಸಿಕೊಳ್ಳುತ್ತಿದೆಯಾ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದೇಶದ ಬಾವುಗಳು ಹಾರಾಡಬೇಕಾದ ಸ್ಥಳದಲ್ಲಿ ಬಿಜೆಪಿ ಪಕ್ಷದ ಬಾವುಟಗಳನ್ನು ಹಾಕಿರುವುದು ಎಷ್ಟರ ಮಟ್ಟಿಗೆ ಸರಿ ಹೇಳಿ? ಇದನ್ನು ಕಂಡ ಪಾಲಿಕೆ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರಾ? ಎಂದು ಸಾರ್ವಜನಿಕರ ಪ್ರಶ್ನೆ ಮಾಡುತ್ತಿದ್ದಾರೆ.
-ಈರಣ್ಣ ವಾಲಿಕಾರ ಪಬ್ಲಿಕ್ ನೆಕ್ಸ್ಟ್,,,,,
Kshetra Samachara
15/08/2021 06:40 pm