ಕಲಘಟಗಿ: ನೀವೆ ಸರಕಾರದಲ್ಲಿ ಇದ್ದು,ನೀವೇ ಸ್ಟ್ರ್ಯಕ್ (ಪ್ರತಿಭಟನೆ) ಮಾಡಿದರೆ ಅರ್ಥ ಏನು? ಅಂದರೆ ಸರಕಾರ ಸತ್ತು ಹೋಗಿ ಅಂತಾತಾನೇ ಎಂದು ಮಾಜಿ ಸಚಿವ ಸಂತೋಷ ಲಾಡ್ ತಿಳಿಸಿದರು.
ಅವರು ಕಲಘಟಗಿ ತಾಲೂಕಿನ ಮಡ್ಕಿಹೊನ್ನಳ್ಳಿಯ ಅಮೃತ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿಮಾತನಾಡಿ,ಶಾಸಕರಾದ ಸಿ ಎಂ ನಿಂಬಣ್ಣವರ ದಿ:ಅ ೨೩ ರಂದು ಧಾರವಾಡ-ರಾಮನಗರ ರಸ್ತೆ ಟೋಲ್ ಬಂದ್ ಮಾಡಿ ಪ್ರತಿಭಟನೆ ಮಾಡುವುದರ ಕುರಿತು ಪ್ರತಿಕ್ರಿಯೆಯನ್ನು ನೀಡಿ, ತಮ್ಮದೇ ಸರಕಾರ ಇರುವಾಗ ಶಾಸಕರು ಪ್ರತಿಭಟನೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ರೋಲಿಂಗ್ ಪಾರ್ಟಿ ಎಂಎಲ್ಎ ಮಾತು ನಡೆಯುವುದಿಲ್ಲ ಎಂದ ಮೇಲೆ ಸರಕಾರ ಸತ್ತು ಹೋಗಿದೆ ಅಂತಾ ತಾನೇ ಎಂದು ಪ್ರಶ್ನಿಸಿದರು.ಅವರ ಸರಕಾರ ಅವರ ಸಚಿವರು ಇದ್ದು ಸಚಿವರ ಮನೆ ಮುಂದೆ ಧರಣಿ ಮಾಡಲಿ ಎಂದರು.
Kshetra Samachara
12/08/2021 09:14 pm