ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಆಜಾದಿ ಕಾ ಅಮೃತ ಮಹೋತ್ಸವ; ನಗರಗಳಲ್ಲಿ ಪಾರಂಪರಿಕ ನಡಿಗೆ

ಧಾರವಾಡ : ಜಿಲ್ಲಾಡಳಿತ,ಪ್ರವಾಸೋದ್ಯಮ ಇಲಾಖೆ ಹಾಗೂ ಪುರಾತತ್ವ ಇಲಾಖೆಗಳ ಸಹಯೋಗದಲ್ಲಿ ಸ್ವಾತಂತ್ರ್ಯದ 75 ನೇ ವರ್ಷಾಚರಣೆ ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ನಗರದ ಕರ್ನಾಟಕ ಕಾಲೇಜಿನಲ್ಲಿ ಆಯೋಜಿಸಿದ ಪಾರಂಪರಿಕ ನಡಿಗೆ ಕಾರ್ಯಕ್ರಮಕ್ಕೆ ಅಪರ ಜಿಲ್ಲಾಧಿಕಾರಿ ಶಿವಾನಂದ ಕರೆಳಾ ಅವರು ಚಾಲನೆ ನೀಡಿದರು.

ಐತಿಹಾಸಿಕ ಮಹತ್ವವುಳ್ಳ ಡಯಟ್ ಕಟ್ಟಡ,ಜಿಮ್‍ಖಾನಾ ಕ್ಲಬ್,ಕಿತ್ತೂರು ರಾಣಿ ಚನ್ನಮ್ಮ ಉದ್ಯಾನವನದ ವಿಜಯಸ್ತಂಭ,ರಾಷ್ಟ್ರೀಯ ಚಳವಳಿ ನಡೆದ ಲಿಂಗಾಯತ್ ಟೌನ್‍ಹಾಲ್,ಕರ್ನಾಟಕ ವಿದ್ಯಾವರ್ಧಕ ಸಂಘ,1921 ರಲ್ಲಿ ಅಸಹಕಾರ ಚಳವಳಿ ಸಂದರ್ಭದಲ್ಲಿ ಸೇಂದಿ ಅಂಗಡಿಯೊಂದರ ಮುಂದೆ ಶಾಂತಿಯುತವಾಗಿ ಪಿಕೇಟಿಂಗ್ ನಡೆಸುತ್ತಿದ್ದ ಮೂವರು ಬ್ರಿಟಿಷರ ಗುಂಡಿಗೆ ಬಲಿಯಾದ ಜಕಣಿ ಬಾವಿ ಹತ್ತಿರದ ಸ್ಮಾರಕ ಮತ್ತಿತರ ಸ್ಥಳಗಳಿಗೆ ನಡಿಗೆ ಮೂಲಕ ಸಾರ್ವಜನಿಕ ಆಜಾದಿ ಕಾ ಅಮೃತ ಮಹೋತ್ಸವ ತಿಳಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ನಿರ್ದೇಶಕ ಮಂಜುನಾಥ ಡೊಳ್ಳಿನ,ಸೇರಿದಂತೆ ತಜ್ಞರು, ಪ್ರವಾಸೋದ್ಯಮ ಕಾಲೇಜುಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Edited By : Manjunath H D
Kshetra Samachara

Kshetra Samachara

12/08/2021 12:50 pm

Cinque Terre

21.17 K

Cinque Terre

0

ಸಂಬಂಧಿತ ಸುದ್ದಿ