ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವರ್ತಕರು ಕೈಗಾರಿಕಾ ಉದ್ಯಮಿಗಳು ಲಾರಿ ಮಾಲೀಕರ ಬೇಡಿಕೆಯನ್ನು ಈಡೇರಿಸಬೇಕು- ಗೈಬುಸಾಬ ಹೊನ್ನಾಳ ಮನವಿ

ಹುಬ್ಬಳ್ಳಿ: ಲಾರಿಗಳನ್ನು ಬಾಡಿಗೆ ಪಡೆದ ವರ್ತಕರು, ಹಾಗೂ ಕೈಗಾರಿಕಾ ಉದ್ಯಮ ಲಾರಿಯಲ್ಲಿನ ಸರಕುಗಳನ್ನು, ಲೋಡ್ ಮತ್ತು ಅನ್ ಲೋಡ್ ನ್ನು ತಾವೇ ಮಾಡಬೇಕು, ಇದರಿಂದ ಲಾರಿ ಮಾಲೀಕರಿಗೆ ಬಹಳಷ್ಟು ಹೊರೆಯಾಗುತ್ತಿದೆ ಎಂದು, ಉತ್ತರ ಕರ್ನಾಟಕ ಲಾರಿ ಮಾಲೀಕರ ಸಂಘದ ಅಧ್ಯಕ್ಷರು ಗೈಬುಸಾಬ ಹೊನ್ನಾಳ ಮನವಿ ಮಾಡಿದರು.

ನಗರದಲ್ಲಿಂದು ಸಭೆ ಸೇರಿ ಮಾತನಾಡಿದ ಅವರು, ಕೊರೊನಾ ಸಂಕಷ್ಟ ಒಂದು ಕಡೆಯಾದ್ರೆ ಇಂಧನ ಬೆಲೆ ಗಗನಕ್ಕೆ ಏರಿದೆ, ಅದಕ್ಕಾಗಿ ಲಾರಿ ಮಾಲೀಕರು ಬಹಳ ಸಂಕಷ್ಟಕ್ಕೆ ಸಿಲುಕಿದ್ದು, ವರ್ತಕರು ಕೈಗಾರಿಕಾ ಉದ್ಯಮಿಗಳು ನಮ್ಮ ಬೇಡಿಕೆಯನ್ನು ಈಡೇರಿಸಬೇಕೆಂದು ಮನವಿ ಮಾಡಿದರು. ‌ಇದೇ ಸಂದರ್ಭದಲ್ಲಿ ಲಾರಿ ಮಾಲೀಕರು ಹಾಗೂ ಚಾಲಕರು ಇದ್ದರು.

Edited By : Shivu K
Kshetra Samachara

Kshetra Samachara

11/08/2021 10:07 am

Cinque Terre

21.12 K

Cinque Terre

1

ಸಂಬಂಧಿತ ಸುದ್ದಿ