ಧಾರವಾಡ: ಭ್ರಷ್ಟ ರಾಜಕಾರಣಿಗಳು ಪವಿತ್ರ ರಾಜಕಾರಣವನ್ನು ಬಿಟ್ಟು ತೊಲಗಬೇಕು. ನಾಡಪ್ರೇಮಿಗಳು ಪವಿತ್ರ ರಾಜಕಾರಣಕ್ಕೆ ಬರಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾ ರೆಡ್ಡಿ ಹೇಳಿದರು.
ಧಾರವಾಡದ ನೌಕರರ ಭವನದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ 2ನೇ ವರ್ಷದ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದು ರಾಜಕೀಯವನ್ನು ಮೂರು ಪಕ್ಷದವರು ಹದಗೆಡಿಸಿ ಇಟ್ಟಿದ್ದಾರೆ, ಪ್ರಾಮಾಣಿಕರು ರಾಜಕೀಯಕ್ಕೆ ಬರದ ಹಾಗೆ ವ್ಯವಸ್ಥೆಯನ್ನು ಉದ್ದೇಶಪೂರ್ವಕವಾಗಿ ರೂಪಿಸಿದ್ದಾರೆ, ಆದರೆ ನಮ್ಮ ಕೆಆರ್‌ಎಸ್ ಪಕ್ಷ ಇದಕ್ಕೆಲ್ಲಾ ವಿರುದ್ಧವಾಗಿದೆ. ಪ್ರಾಮಾಣಿಕರಿಗೆ ಚುನಾವಣೆಯಲ್ಲಿ ನಿಲ್ಲೋದಕ್ಕೆ ಅವಕಾಶ ಕೂಡುತ್ತೇವೆ. ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ ಮುಕ್ತ ಕರ್ನಾಟಕ ಮಾಡುತ್ತೇವೆ ಎಂದರು.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಉಪಾಧ್ಯಕ್ಷ ಎಸ್.ಎಚ್.ಲಿಂಗೇಗೌಡ್ರು ಮಾತನಾಡಿ, ಪ್ರಸ್ತುತ ರಾಜಕೀಯ ವಿದ್ಯಮಾನದಲ್ಲಿ ಬಡವರಿಗೆ ಸರ್ಕಾರದಿಂದ ಸರಿಯಾಗಿ ಸೌಲಭ್ಯಗಳು ದೊರೆಯುತ್ತಿಲ್ಲ. ನಮ್ಮ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಸ್ವಚ್ಛ ಪ್ರಾಮಾಣಿಕ ಆಡಳಿತವನ್ನು ನೀಡಲು ಇಂದು ರಾಜಕೀಯಕ್ಕೆ ಬಂದಿದೆ. ಯುವಕರು ಹೆಚ್ಚಾಗಿ ಕೆಆರ್‌ಎಸ್ ಪಕ್ಷಕ್ಕೆ ಬರಬೇಕು ಎಂದರು.
ಪಕ್ಷದ ಜಂಟಿ ಕಾರ್ಯದರ್ಶಿ ಸೋಮ ಸುಂದರ, ರಾಜ್ಯ ಖಜಾಂಚಿ ಅರವಿಂದ ಕೆ.ಬಿ. ಸೇರಿದಂತೆ ಇತರರು ಇದ್ದರು.
Kshetra Samachara
10/08/2021 05:44 pm