ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಿದ್ಯುತ್ ಖಾಸಗೀಕರಣ ವಿರೋಧಿಸಿ ಪವರ್ ಮೆನ್ಸ್ ಪ್ರತಿಭಟನೆ

ಹುಬ್ಬಳ್ಳಿ- ಕೇಂದ್ರ ಸರ್ಕಾರ ಜಾರಿ ಮಾಡಿರುವ ವಿದ್ಯುತ್(ತಿದ್ದುಪಡಿ) ಮಸೂದೆ-2021 ವಿರೋಧಿಸಿ ಕಾರ್ಮಿಕರು ಹೆಸ್ಕಾಂ ಕೇಂದ್ರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಗುತ್ತಿಗೆ ನೌಕರರು ಪಾಲ್ಗೊಂಡಿದ್ದರು.

ಕೇಂದ್ರ ಸರ್ಕಾರ ಜಾರಿ ಮಾಡಲು ಉದ್ದೇಶಿಸಿರುವ ಈ ಮಸೂದೆಯಿಂದ ಜನಸಾಮಾನ್ಯರಿಗೆ ನೇರವಾಗಿ ಸರ್ಕಾರದಿಂದ ದೊರೆಯುವ ಭಾಗ್ಯಜ್ಯೋತಿ, ಕುಟಿರಜ್ಯೋತಿ ಮತ್ತಿರರ ಯೋಜನೆಗಳು ಸ್ಥಗಿತಗೊಳ್ಳಲಿವೆ. ಮತ್ತು ಒಟ್ಟಾರೆ ವಿದ್ಯುತ್ ವಿತರಣೆ ವ್ಯವಸ್ಥೆ ಕಾರ್ಪೋರೇಟ್ ವಲಯದ ಬಿಗಿ ಹಿಡಿತಕ್ಕೆ ಸಿಗಲಿದೆ. ಸಾರ್ವಜನಿಕ ಸೇವಾ ವಲಯವಾದ ವಿದ್ಯುತ್ ಈ ಮಸೂದೆ ಜಾರಿಯಾದರೆ ಸಂಪೂರ್ಣ ಖಾಸಗೀಕರಣವಾಗಲಿದೆ. ಹೀಗಾಗಿ ಈ ಮಸೂದೆಯನ್ನು ಕೇಂದ್ರ ಜಾರಿ ಮಾಡಬಾರದು. ಹಾಗೂ ಎಲ್ಲ ವಿದ್ಯುತ್ ನಿಗಮಗಳಲ್ಲಿನ ಗುತ್ತಿಗೆ ನೌಕರರನ್ನು ಖಾಯಂಗೊಳಿಸಬೇಕು ಎಂಬುದು ಪ್ರತಿಭಟನೆಕಾರರ ಒತ್ತಾಯವಾಗಿದೆ.

Edited By : Nagesh Gaonkar
Kshetra Samachara

Kshetra Samachara

10/08/2021 03:59 pm

Cinque Terre

30.8 K

Cinque Terre

2

ಸಂಬಂಧಿತ ಸುದ್ದಿ