ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ತಿಳಿದೋ ತಿಳಿಯದೆಯೋ ತಪ್ಪಾಗಿರಬಹುದು

ಧಾರವಾಡ: ಬ್ಯಾನರ್‌ನಲ್ಲಿ ಅರವಿಂದ ಬೆಲ್ಲದ ಫೋಟೋ ಹಾಕದೇ ಇರುವ ವಿಚಾರ ಇದೀಗ ತಾರಕಕ್ಕೇರಿದೆ. ಬೆಲ್ಲದ ಫೋಟೋ ಇಲ್ಲದೇ ಇರುವ ಬ್ಯಾನರ್‌ಗಳನ್ನು ಅವರ ಬೆಂಬಲಿಗರು ಹರಿದು ಹಾಕುತ್ತಿದ್ದಾರೆ. ನಿನ್ನೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಧಾರವಾಡಕ್ಕೆ ಆಗಮಿಸುತ್ತಿದ್ದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತ ನಿತಿನ್ ಇಂಡಿ ಅವರು ಅಲ್ಲಲ್ಲಿ ಅವರ ಸ್ವಾಗತಕ್ಕಾಗಿ ಬ್ಯಾನರ್‌ಗಳನ್ನು ಹಾಕಿಸಿದ್ದರು. ಆದರೆ, ಅವುಗಳಲ್ಲಿ ಬೆಲ್ಲದ ಅವರ ಫೋಟೋ ಇಲ್ಲದೇ ಇದ್ದಿದ್ದರಿಂದ ಆ ಬ್ಯಾನರ್‌ಗಳನ್ನು ಹರಿದು ಹಾಕಲಾಗಿದೆ.

ಈ ಸಂಬಂಧ ಧಾರವಾಡ 71 ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಫೇಸ್ಬುಕ್ ಪೋಸ್ಟ್‌ ಹಾಕಿದ್ದು, ತಿಳಿದೋ ತಿಳಿಯದೆಯೋ ಸಣ್ಣ ಪ್ರಮಾಣದ ಕಾರ್ಯಕರ್ತರಿಂದ ತಪ್ಪಾಗಿರಬಹುದು. ಆದರೆ, ಪಕ್ಷದಿಂದ ಚುನಾಯಿತ ಶಾಸಕರಾಗಿ ಆಯ್ಕೆಯಾಗಿ, ಸಚಿವರಾಗಿ ಕ್ಷೇತ್ರದ ಸೇವೆಗಾಗಿ ಬಂದಂತ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಅವರಿಗೆ ಹಾಗೂ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಅವರಿಗೆ ಸ್ವಾಗತ ಕೋರುವುದು ನಮ್ಮ ಕರ್ತವ್ಯ. ಈ ಜನಪ್ರತಿನಿಧಿಗಳೊಂದಿಗೆ ವೈಯಕ್ತಿಕ ರಾಜಕೀಯ ಮನಸ್ತಾಪದಿಂದ ಈ ರೀತಿಯ ಅವಮಾನ ಮಾಡುವುದು ಹಾಗೂ ಕೆಳಮಟ್ಟದ ರಾಜಕಾರಣ ಮಾಡುವುದು ಶೋಭೆ ತರುವಂತದ್ದಲ್ಲ. ಇದರ ಹಿಂದೆ ಇರುವ ಯಾವುದೇ ನಾಯಕರಾಗಲಿ ದಯವಿಟ್ಟು ತಮ್ಮ ಕಾರ್ಯಕರ್ತರಿಗೆ ತಿಳಿಹೇಳುವುದು ಪಕ್ಷದ ಚೌಕಟ್ಟಿನಲ್ಲಿ ಉತ್ತಮ ಕೆಲಸ.

ಇಂತಿ ಧಾರವಾಡ ನಗರ ಘಟಕ 71ರ ಪಕ್ಷದ ಕಾರ್ಯಕರ್ತರು ಹಾಗೂ ಹಿತೈಷಿಗಳು ಎಂದು ಪೋಸ್ಟ್ ಹಾಕಿದ್ದಾರೆ.

Edited By : Manjunath H D
Kshetra Samachara

Kshetra Samachara

08/08/2021 01:50 pm

Cinque Terre

58.04 K

Cinque Terre

3

ಸಂಬಂಧಿತ ಸುದ್ದಿ