ಧಾರವಾಡ: ಸಚಿವರಾದ ಬಳಿಕ ಮೊದಲ ಬಾರಿಗೆ ಧಾರವಾಡ ಜಿಲ್ಲೆಗೆ ಭೇಟಿ ನೀಡಿರುವ ಶಂಕರ ಪಾಟೀಲ ಮುನೇನಕೊಪ್ಪ ಅವರು ಧಾರವಾಡದ ಪ್ರತಿಷ್ಟಿತ ಮುರುಘಾಮಠಕ್ಕೆ ಭೇಟಿ ನೀಡಿ ಮುರುಘೇಂದ್ರ ಮಹಾಶಿವಯೋಗಿಗಳ ಹಾಗೂ ಮೃತ್ಯುಂಜಯಪ್ಪಗಳ ಆಶೀರ್ವಾದ ಪಡೆದರು.
ಮುರುಘಾಮಠಕ್ಕೆ ಸಚಿವರು ಭೇಟಿ ನೀಡುತ್ತಿದ್ದಂತೆ ಬಿಜೆಪಿ ಮಹಿಳಾ ಸದಸ್ಯೆಯರು, ಅವರಿಗೆ ಆರತಿ ಮಾಡಿ ಬರಮಾಡಿಕೊಂಡರು.
ಮಲ್ಲಿಕಾರ್ಜುನ ಸ್ವಾಮೀಜಿಯನ್ನು ಭೇಟಿ ಮಾಡಿದ ಸಚಿವರು ಸ್ವಾಮೀಜಿಗಳನ್ನು ಸನ್ಮಾನಿಸಿ ಅವರ ಆಶೀರ್ವಾದವನ್ನೂ ಪಡೆದರು. ನಂತರ ಮಲ್ಲಿಕಾರ್ಜುನ ಸ್ವಾಮೀಜಿ ಸಚಿವರಿಗೆ ರುದ್ರಾಕ್ಷಿ ಸರ ಹಾಕಿ ಸನ್ಮಾನಿಸಿದರು.
ಈ ವೇಳೆ ಶಾಸಕ ಅಮೃತ ದೇಸಾಯಿ, ಮಾಜಿ ಶಾಸಕಿ ಸೀಮಾ ಮಸೂತಿ, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಸೇರಿದಂತೆ ಅನೇಕರು ಇದ್ದರು.
Kshetra Samachara
07/08/2021 04:58 pm