ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಸಿಎಂ ಬೊಮ್ಮಾಯಿಗೆ ಕಲ್ಯಾಣಪುರ ಶ್ರೀ ಶುಭಾಶಯ, ರಾಜ್ಯದ ಏಳ್ಗೆಗೆ ಮನವಿ

ಕುಂದಗೋಳ : ಲೋಕಕಲ್ಯಾಣಕ್ಕಾಗಿ ಮೌನ ಅನುಷ್ಠಾನ ಕೈಗೊಂಡಿದ್ದ ಅಭಿನವ ಕಲ್ಯಾಣಪುರ ಬಸವಣ್ಣನವರು ಅನುಷ್ಠಾನ ಸಂಪನ್ನದ ಬಳಿಕ ಮೌನ ಮುರಿದು ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶುಭಾಶಯ ಕೋರಿ ರಾಜ್ಯದ ಏಳ್ಗೆ ಜೊತೆ ಕುಂದಗೋಳ ತಾಲೂಕಿನ ವಿಶೇಷ ಅಭಿವೃದ್ಧಿಗೆ ಶ್ರಮಿಸುವಂತೆ ಮನವಿ ಮಾಡಿದರು.

ಕುಂದಗೋಳ ಪಟ್ಟಣದ ಕಲ್ಯಾಣಪುರ ಮಠದ ಆವರಣದಲ್ಲಿ ಸುದ್ಧಿಗೋಷ್ಠಿ ಏರ್ಪಡಿಸಿದ ಅವರು ನಾವು ಮೌನ ಅನುಷ್ಠಾನ ತಳೆದ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಆಯ್ಕೆಯಾದ ವಿಚಾರ ಖುಷಿ ತಂದಿದೆ. ಹಿರಿಯ ರಾಜಕೀಯ ಮುತ್ಸದ್ದಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿ ರಾಜ್ಯವೇ ಗೌರವ ಪಡುವ ಕೆಲಸ ಮಾಡಿದ್ದಾರೆ ಎಂದರು.

ನಮ್ಮ ಕುಂದಗೋಳ ಪಟ್ಟಣಕ್ಕೆ ಈ ಹಿಂದೆ ಶುದ್ಧ ಕುಡಿಯುವ ನೀರು ನೀಡಿ ಮಹತ್ವದ ಕೆಲಸವನ್ನು ಬಸವರಾಜ ಬೊಮ್ಮಾಯಿ ಮಾಡಿದ್ದಾರೆ ಅದರಂತೆ ಸಂಪೂರ್ಣ ಕುಂದಗೋಳ ತಾಲೂಕಿಗೆ ಕುಡಿಯುವ ನೀರು ಸೇರಿದಂತೆ ಇತರೆ ಮೂಲ ಸೌಕರ್ಯ ಹಾಗೂ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ಕೊಡುವ ಕೆಲಸ ಮಾಡಿ ಎಂದು ನೂತನ ಸಿಎಂಗೆ ಶುಭ ಹಾರೈಸಿ ಮಾಜಿ ಮುಖ್ಯಮಂತ್ರಿ ದಿ.ಎಸ್.ಆರ್.ಬೊಮ್ಮಾಯಿ ಕುಂದಗೋಳದವರು ಬೊಮ್ಮಾಯಿಗೆ ಕುಂದಗೋಳ ತವರು ಮನೆ ಎಂದರು.

Edited By : Manjunath H D
Kshetra Samachara

Kshetra Samachara

07/08/2021 12:10 pm

Cinque Terre

25.39 K

Cinque Terre

0

ಸಂಬಂಧಿತ ಸುದ್ದಿ