ಹುಬ್ಬಳ್ಳಿ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹುಬ್ಬಳ್ಳಿಗೆ ಭೇಟಿ ನೀಡಿದ ಹಿನ್ನಲೆಯಲ್ಲಿ ಅಭಿಮಾನಿಗಳು ಹಾಗೂ ಬೆಂಬಲಿಗರು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಅದ್ದೂರಿಯಾಗಿ ಸ್ವಾಗತಿಸಿದರು.
ಸಚಿವರಾದ ಬಳಿಕ ತವರಿಗೆ ಮೊದಲ ಭೇಟಿಯಾಗಿದ್ದು,ಶಂಕರ ಪಾಟೀಲ ಮುನೇನಕೊಪ್ಪಗೆ ಸ್ವಾಗತಿಸಲು ವಿಮಾನ ನಿಲ್ದಾಣ ಮುಂಭಾಗದಲ್ಲಿ ಸಾವಿರಾರು ಜನರು ಜಮಾಯಿಸಿದ್ದರು. ಇನ್ನೂ ಏರ್ಪೋರ್ಟ್ ಮುಂಭಾಗದಲ್ಲಿ ಕಾರುಗಳ ದೊಡ್ಡ ಸಾಲು ಕಂಡು ಬಂದಿತು.
ಹುಬ್ಬಳ್ಳಿ, ನವಲಗುಂದ ಭಾಗದಿಂದ ಸಾಗರೋಪಾದಿಯಲ್ಲಿ ಜನರು ಆಗಮಿಸಿದ್ದು, ವಿಮಾನ ನಿಲ್ದಾಣದ ಮುಂಭಾಗದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಏರ್ಪೋರ್ಟ್ ನಿಂದ ನೇರವಾಗಿ ಆರ್.ಎಸ್.ಎಸ್ ಕಚೇರಿ ಕೇಶವ ಕುಂಜಕ್ಕೆ ಭೇಟಿ ನೀಡಿ
ಬಳಿಕ ಸಿದ್ಧರೂಢ ಮಠ, ಬಳಿಕ ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲದೇ ದಾರಿಯುದ್ದಕ್ಕೂ ಶಂಕರ ಪಾಟೀಲ ಸ್ವಾಗತಿಸಲು ಅಭಿಮಾನಿಗಳು ನಿಂತಿರುವುದು ವಿಶೇಷವಾಗಿದೆ.
Kshetra Samachara
07/08/2021 12:08 pm