ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಕ್ಷ ಕೊಟ್ಟಿರುವ ಬಹುದೊಡ್ಡ ಜವಾಬ್ದಾರಿ ನಿಭಾಯಿಸಿ ಜನರಿಗೆ ಸಿಹಿ ಸುದ್ಧಿ ಕೊಡುತ್ತೇನೆ: ಶಂಕರ ಪಾಟೀಲ ಮುನೇನಕೊಪ್ಪ

ಹುಬ್ಬಳ್ಳಿ: ನೂತನ ಸಚಿವರಾದ ಮೇಲೆ ಮೊದಲ ಬಾರಿಗೆ ಜಿಲ್ಲೆಗೆ ಅಗಮಿಸುತ್ತಿದ್ದೇನೆ. ಸಿದ್ದಾರೂಢರ ಪುಣ್ಯ ಭೂಮಿ, ರೈತ ನೆಲಕ್ಕೆ ನಾನು ಬಂದಿದ್ದೇನೆ. ಪಕ್ಷ ಬಹು ದೊಡ್ಡ ಜವಾಬ್ದಾರಿಯಿಂದ ನನಗೆ ಸ್ಥಾನ ಕೊಟ್ಟಿದೆ. ಎಲ್ಲ ಜವಾಬ್ದಾರಿಯನ್ನು ನಾನು ಅಚ್ಚುಕಟ್ಟಾಗಿ ನಿರ್ವಹಿಸುತ್ತೇನೆ ಎಂದು ನೂತನ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಭರವಸೆ ನೀಡಿದರು.

ಸಚಿವರಾಗಿ ಮೊದಲ ಬಾರಿಗೆ ತವರು ಜಿಲ್ಲೆಗೆ ಆಗಮಿಸಿದ ಅವರು,ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದರು.

ನಾನು ಕೆಳಮಟ್ಟದಿಂದ ಹೋರಾಟದ ಮೂಲಕ ಬಂದಿದ್ದೇನೆ. ಪ್ರಪ್ರಥಮವಾಗಿ ಪ್ರತಿಯೊಂದು ಮನೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಿದೆ. ಈಗಾಗಲೇ ಕಳಸಾ ಬಂಡೂರಿ ಹೋರಾಟದಲ್ಲಿ ಎಲ್ಲರೂ ಪಾಲ್ಗೊಂಡಿದ್ದೇವೆ. ಹಿರಿಯ ನಾಯಕರಿಂದ ಹಿಡಿದು ನಾವೆಲ್ಲರೂ ಭಾಗಿಯಾಗಿದ್ದಕ್ಕೆ ಈ ಸ್ಥಾನದಲ್ಲಿದ್ದೇವೆ. ಹತ್ತು ಹಲವು ಕಾನೂನಾತ್ಮಕ ವಿಚಾರಗಳನ್ನು ಬಗೆಹರಿಸುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದರು.

ರೈತರ ಮಹಾದಾಯಿ ಹೋರಾಟ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಟ್ರಿಮಿನಲ್ ಆದೇಶ ಆಗಿದೆ. 4 ಟಿಎಂಸಿ ಕುಡಿಯುವ ನೀರಿನ ಆದೇಶ ಆಗಿದೆ. ಸಣ್ಣ ಪುಟ್ಟ ತೊಡಕುಗಳನ್ನು ಬಗೆಹರಿಸಿ ಯೋಜನೆಯನ್ನು ಜಾರಿ ಮಾಡುತ್ತೇವೆ. ಗೊಂದಲಗಳು ಆಗಬಾರದು 330 ಹಳ್ಳಿಗಳಿಗೂ ನೀರು ಕೊಡುವ ಯೋಜನೆ ಮಾಡುತ್ತಿದ್ದೇವೆ. ಕಳಸಾ ಬಂಡೂರಿ ಬಗ್ಗೆ ಗೊಂದಲದ ಹೇಳಿಕೆ ನೀಡುವುದು ಬೇಡ ಎಂದ ಅವರು,

ಮೂರು ರಾಜ್ಯಗಳ ಸಹಕಾರ ಈ ವಿಚಾರದಲ್ಲಿ ಬೇಕಾಗುತ್ತದೆ ಎಂದು ಅವರು ಹೇಳಿದರು.

ತುಪ್ಪರಿ ಹಳ್ಳ ಮತ್ತು ಬೆಣ್ಣೆ ಹಳ್ಳದ ಡ್ರೋನ್ ಸರ್ವೇ ಆಗಿದೆ. ಇನ್ನೂ 60 ದಿನಗಳಲ್ಲಿ ಜನರಿಗೆ ಸಿಹಿ ಸುದ್ದಿ ನೀಡುತ್ತೇನೆ. ಯಾವ ಖಾತೆ ಕೊಟ್ಟರೂ ನಾನು ನಿಭಾಯಿಸುತೇನೆ ಎಂದು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಹೇಳಿದರು.

Edited By : Shivu K
Kshetra Samachara

Kshetra Samachara

07/08/2021 10:22 am

Cinque Terre

22.31 K

Cinque Terre

8

ಸಂಬಂಧಿತ ಸುದ್ದಿ