ಹುಬ್ಬಳ್ಳಿ: ನೂತನವಾಗಿ ರಾಜ್ಯದಲ್ಲಿ ಮಂತ್ರಿಮಂಡಲ ರಚನೆಯಾಗಿದೆ. ನಾನು ಮತ್ತು ಶಂಕರ ಪಾಟೀಲ ಮುನೇನಕೊಪ್ಪ ಇಬ್ಬರೂ ಮುಂಬರುವ ದಿನಗಳಲ್ಲಿ ಉತ್ತಮವಾದ ಕೆಲಸವನ್ನು ಮಾಡುತ್ತೇವೆ. ಯಾವುದೇ ಖಾತೆಯನ್ನು ಕೊಟ್ಟರು ಚನ್ನಾಗಿ ನಿಭಾಯಿಸುತ್ತೇನೆ ಎಂದು ನೂತನ ಸಚಿವ ಮುರಗೇಶ್ ನಿರಾಣಿ ಹೇಳಿದರು.
ನೂತನ ಸಚಿವರಾದ ಬಳಿಕ ವಾಣಿಜ್ಯನಗರಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿ ಮಾತನಾಡಿದ ಅವರು, ನೂತನವಾಗಿ ಮಂತ್ರಿ ಮಂಡಲ ರಚನೆಯಾಗಿದೆ. ಜಗದೀಶ್ ಶೆಟ್ಟರ್ ಮತ್ತು ಯಡಿಯೂರಪ್ಪರ ನೇತೃತ್ವದಲ್ಲಿ ಉತ್ತಮ ಕೆಲಸ ಮಾಡುತ್ತೇವೆ ಎಂದರು.
ಎಲ್ಲರೂ ಬಿಟ್ಟಿರುವ ಖಾತೆಯನ್ನು ನನಗೆ ಕೊಟ್ಟರು ನಾನು ನಿರ್ವಹಿಸುತ್ತೇನೆ. ನನಗೆ ಇದೆ ಖಾತೆ ಬೇಕು ಅಂತ ಏನು ಇಲ್ಲ ಯಾವುದನ್ನು ಕೊಟ್ಟರು ಸರಿಯಾಗಿ ನಿರ್ವಹಣೆ ಮಾಡುತ್ತೇನೆ ಎಂದು ಅವರು ಹೇಳಿದರು.
Kshetra Samachara
07/08/2021 09:33 am