ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಯಾವ ಶಾಸಕರೂ ಒಕ್ಕಟ್ಟು ಪ್ರದರ್ಶಿಸಲಿಲ್ಲ: ಬೆಲ್ಲದ ಒಬ್ಬಂಟಿಯಾದ್ರು

ಧಾರವಾಡ: ಹುಬ್ಬಳ್ಳಿ, ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರಿಗೆ ಸಚಿವ ಸ್ಥಾನ ಕೈತಪ್ಪಿದ್ದರಿಂದ ಅವರ ಬೆಂಬಲಿಗರು ಧಾರವಾಡದ ಆಲೂರು ವೆಂಕಟರಾವ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ನೀಡಿದ್ದ ಬೆಲ್ಲದ ಅವರು ಕೊನೆಗೆ ಸಚಿವರಾದರೂ ಆಗುತ್ತಾರೆ ಎಂಬ ಆಶಾ ಮನೋಭಾವನೆ ಇತ್ತು. ಆದರೆ, ಧಾರವಾಡ ಜಿಲ್ಲೆಯ ಬಿಜೆಪಿಯ ಯಾವ ಶಾಸಕರೂ ಒಕ್ಕಟ್ಟು ಪ್ರದರ್ಶನ ಮಾಡದೇ ಇದ್ದಿದ್ದರಿಂದ ಬೆಲ್ಲದ ಅವರಿಗೆ ಸಚಿವ ಸ್ಥಾನ ಕೈತಪ್ಪಿದೆ ಎಂದು ಬೆಲ್ಲದ ಬೆಂಬಲಿಗರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಲೂರು ವೆಂಕಟರಾವ್ ವೃತ್ತದಲ್ಲಿ ಬೆಲ್ಲದ ಬೆಂಬಲಿಗರು ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದರಿಂದ ಕೆಲಹೊತ್ತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಮುಂದಿನ ದಿನದಲ್ಲಾದರೂ ಬೆಲ್ಲದ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

Edited By : Manjunath H D
Kshetra Samachara

Kshetra Samachara

04/08/2021 01:58 pm

Cinque Terre

24.49 K

Cinque Terre

3

ಸಂಬಂಧಿತ ಸುದ್ದಿ