ಹುಬ್ಬಳ್ಳಿ: ಹುಬ್ಬಳ್ಳಿ ತಾಲೂಕಿನ ಹೆಬಸೂರ ಗ್ರಾಮದಲ್ಲಿ, ಪ್ರತಿಷ್ಠಾಪನೆ ಮಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಈಗ ತೆರವುಗೋಳಿಸುತ್ತಿರುವುದನ್ನು ರಾಯಣ್ಣ ಅಭಿಮಾನಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ಏಳೆಂಟು ದಿನಗಳ ಹಿಂದೆ ಹೆಬಸೂರ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಅನುಮತಿ ಪಡೆದು, ಕೋಟೆ ಸಮೇತ ರಾಯಣ್ಣ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಿದ್ದಾರು. ಸದ್ಯ ಗ್ರಾಮಸ್ಥರಲ್ಲಿ ಕೆಲ ಜನರು ರಾಯಣ್ಣ ಪ್ರತಿಮೆ ಬೇಡ ಎಂದು, ತೆರವುಗೋಳಿಸುತ್ತಿರುವುದನ್ನು ರಾಯಣ್ಣ ಅಭಿಮಾನಿಗಳು ಸಿಡಿದೆಳುತ್ತಿದ್ದಾರೆ.
Kshetra Samachara
03/08/2021 07:28 pm