ಹುಬ್ಬಳ್ಳಿ: ಅಂತೂ ಇಂತೂ ಮುಹೂರ್ತ ಕೂಡಿ ಬಂತು ಎನ್ನುವಂತೆ ಹು-ಧಾ ಮಹಾನಗರ ಪಾಲಿಕೆ ಚುನಾವಣೆಗೆ ಕಾಲ ಸನ್ನಿಹಿತವಾಗುತ್ತಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆ ಪ್ರಸಕ್ತ ಅಗಸ್ಟ್ ತಿಂಗಳಲ್ಲೇ ನಡೆಯುವುದು ಬಹುತೇಕ ಖಚಿತವಾಗಿದ್ದು, ಎಲ್ಲ ಸಿದ್ಧತೆಗಳು ಭರದಿಂದ ಸಾಗಿವೆ.
ಹೌದು.. ಜಿಲ್ಲಾಧಿಕಾರಿ ನಿತೇಶ ಪಾಟೀಲ ಶುಕ್ರವಾರ ಚುನಾವಣಾ ಆಯೋಗದೊಂದಿಗೆ ಚರ್ಚೆ ನಡೆಸಿದ ನಂತರ ಅಲ್ಲಿ ಚರ್ಚಿಸಲಾದ ವಿಷಯದಂತೆ ಎಲ್ಲ ಅವಶ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಪಾಲಿಕೆ ಆಯುಕ್ತರಿಗೆ ಆದೇಶ ನೀಡಿದ್ದು, ನಾಡಿದ್ದು ದಿ.5 ರಂದು ಘೋಷಣೆಯಾಗುವ ಸಾಧ್ಯತೆಗಳು ದಟ್ಟವಾಗಿವೆ.ಅಲ್ಲದೇ ಪ್ರತಿ ಐದು ವಾರ್ಡಗೊಂದರಂತೆ ಚುನಾವಣಾ ಅಧಿಕಾರಿ (ಆರ್‌ಓ) ಹಾಗೂ ಸಹಾಯಕ ಚುನಾವಣಾಧಿಕಾರಿ (ಎಆರ್‌ಓ) ನೇಮಕ ಮಾಡಿ ಚುನಾವಣೆ ಆಯೋಗಕ್ಕೆ ತಿಳಿಸಲಾಗಿದೆ.
ಚುನಾವಣಾಧಿಕಾರಿ ಅಸಿಸ್ಟಂಟ್ ಕಮೀಶನರ್ ಕೇಡರ್‌ನವರಾಗಿದ್ದು, ಎಆರ್‌ಓಗಳು ತಹಶೀಲ್ದಾರ ಕೇಡರ್‌ನವರಾಗಿದ್ದಾರೆ. ಈ ಮೊದಲು ಒಂದು ಪಟ್ಟಿಯನ್ನು ಕಳುಹಿಸಲಾಗಿತ್ತಾದರೂ ಅದನ್ನು ಬದಲಿಸುವಂತೆ ಸೂಚಿಸಲಾಗಿತ್ತು. ಹುಬ್ಬಳ್ಳಿ ಧಾರವಾಡದಲ್ಲಿ 03 ವರ್ಷ ಅಧಿಕಾರ ನಿರ್ವಹಿಸಿರುವ ಅಧಿಕಾರಿಗಳನ್ನು ಪಟ್ಟಿಯಲ್ಲಿ ಇಡದಂತೆ ಸೂಚನೆ ನೀಡದೇ ಹಿನ್ನೆಲೆಯಲ್ಲಿ ಬದಲಾಯಿಸಿ ಕಳುಹಿಸಲಾಗಿದೆ.
ಕಾಲಮಿತಿಯೊಳಗೆ ಚುನಾವಣೆ ನಡೆಸಲು ಸರ್ಕಾರ ಮತ್ತು ಆಯೋಗಕ್ಕೆ ನಿರ್ದೇಶನ ನೀಡಲು ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಅರ್ಜಿಯ ವಿಚಾರಣೆ ನಾಳೆ ನಡೆಯಲಿದೆ.
ಅಲ್ಲದೇ ಎಸ್‌ಸಿ ಮೀಸಲಾತಿ ಅನ್ಯಾಯ, ವಾರ್ಡ ಮೀಸಲಾತಿ ಅನ್ಯಾಯ ಕುರಿತ ಅರ್ಜಿಗಳ ವಿಚಾರಣೆಯೂ ನಾಳೆ ಧಾರವಾಡ ಹೈಕೋರ್ಟ್ನಲ್ಲಿ ವಿಚಾರಣೆಗೆ ಬರಲಿದೆ. ಇಂದು ಅಥವಾ ನಾಳೆ ಆಯೋಗ ಮುಚ್ಚಿದ ಲಕೋಟೆಯಲ್ಲಿ ಚುನಾವಣಾ ಪ್ರಕ್ರಿಯೆ ಬಗ್ಗೆ ಹೈಕೋರ್ಟ್ ಗೆ ವಿವರ ನೀಡಬೇಕಾಗಿದೆ. ಸ್ವತಃ ಹೈಕೋರ್ಟ್ ಮುಖ್ಯ ನ್ಯಾಯಾಧೀಶರೇ ಸ್ವಯಂ ಪ್ರೇರಿತವಾಗಿ ವಿಚಾರಣೆಗೆ ಎತ್ತಿಕೊಂಡಿರುವುದರಿಂದ ತಡೆಯಾಜ್ಞೆ ನೀಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಪಾಲಿಕೆಗೆ ಕಳೆದ 28 ತಿಂಗಳಿಂದ ಚುನಾಯಿತ ಆಡಳಿತ ಮಂಡಳಿ ಇಲ್ಲದಿರುವುದರಿಂದ ಅಲ್ಲದೇ ಮತದಾರರ ಪಟ್ಟಿ ಪ್ರಕಟಗೊಂಡ (ಜುಲೈ 09) 45 ದಿನಗಳೊಳಗೆ ಚುನಾವಣೆ ನಡೆಸುವುದಾಗಿ ಈ ಹಿಂದೆಯೇ ಹೈಕೋರ್ಟಗೆ ಆಯೋಗ ಹೇಳಿರುವುದರಿಂದ ಆಯೋಗ ಮತದಾನದ ದಿನಾಂಕ ನಿಶ್ಚಯಿಸಿಯೇ ಹೈಕೋರ್ಟ್ಗೆ ವಿವರ ನೀಡುವುದು ನಿಶ್ಚಿತವಾಗಿದೆ.
ಪ್ರಕರಣದ ವಿಚಾರಣೆ ನಾಳೆ ನಡೆಯಲಿದ್ದು, ತಾನು ಹೈಕೋರ್ಟ್ ಗೆ ನೀಡಿದ ವಿವರಗಳಂತೆ ನಾಡಿದ್ದು ಚುನಾವಣೆ ಆಯೋಗ ಹು.ಧಾ ಪಾಲಿಕೆ ಸಹಿತ ವಿವಿಧ ಅವಧಿ ಮುಗಿದ ಸ್ಥಳೀಯ ಸಂಸ್ಥೆಗಳ ಚುನಾವಣಾ ಘೋಷಣೆ ದಟ್ಟವಾಗಿದ್ದು, 21 ದಿನದೊಳಗೆ ಪ್ರಕ್ರಿಯೆ ಮುಗಿಯಲಿದೆ ಎನ್ನಲಾಗುತ್ತಿದೆ.
Kshetra Samachara
03/08/2021 06:53 pm