ಧಾರವಾಡ : ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರ 52ನೇ ಜನ್ಮ ದಿನದ ಅಂಗವಾಗಿ ಧಾರವಾಡ ಹಲವೆಡೆ ಅಭಿಮಾನಿಗಳು ಹಾಗೂ ಕಾರ್ಯಕರ್ತರು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.ಇತ್ತ ನಗರದ ತೇಜಸ್ವಿ ನಗರದಲ್ಲಿ ಪೌರಕಾರ್ಮಿಕರು ಕೇಕ್ ಕತ್ತರಿಸಿ ವಿಶೇಷವಾಗಿ ಪರಸ್ಪರ ಸಿಹಿ ಹಂಚಿಕೊಳ್ಳುವ ಮೂಲಕ ಶಾಸಕ ಅರವಿಂದ ಬೆಲ್ಲದ ಅವರ ಹುಟ್ಟು ಹಬ್ಬವನ್ನು ಆಚರಿಸಿದರು.
ಈ ಸಂದರ್ಭದಲ್ಲಿ ನೂರಾರು ಜನ ಪೌರಕಾರ್ಮಿಕರಿಗೆ ಸಿಹಿ ಹಾಗೂ ಉಪಹಾರವನ್ನು ನಗರ ಸದ್ಯಸ ಸಂತೋಷ ನಾಗಮ್ಮನವರ,ಗೌಡಪ್ಪ ಪಾಟೀಲ,ಪ್ರಶಾಂತ ನಿಡಗುಂದಿ,ಪುಲ್ಲಯ್ಯ ಚಿಂಚಗೊಳ ಸೇರಿದಂತೆ ನೂರಾರು ಜನ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಇದ್ದರು.
Kshetra Samachara
03/08/2021 01:46 pm