ಕಲಘಟಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನಾಯಕರ ಟಿಕೆಟ್ ಪೈಟ್ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಉಭಯ ನಾಯಕರಾದ ಮಾಜಿ ಸಚಿವ ಸಂತೋಷ ಲಾಡ್ ಹಾಗೂ ಮಾಜಿ ಎಂ.ಎಲ್.ಸಿ ನಾಗರಾಜ ಛಬ್ಬಿ ನಡುವೆ ಪೈಪೋಟಿ ಏರ್ಪಟ್ಟಿದ್ದು, ಈ ಕಾಂಗ್ರೆಸ್ ಹಿರಿಯ ಮುಖಂಡ ಮಾಜಿ ಸಿಎಂ ಸಿದ್ಧರಾಮಯ್ಯ ಸಂತೋಷ ಲಾಡ್ ಪರ ಬ್ಯಾಟಿಂಗ್ ಮಾಡಿದ್ದಾರೆ.
ಸಂತೋಷ ಲಾಡ್ ಗೆಲ್ಲಿಸಬೇಕು- ಲಾಡ್ ಕೇವಲ ಶಾಸಕರಲ್ಲ ಅವರೊಬ್ಬ ನಾಯಕ, ಯಾವುದೇ ಜಾತಿ- ಧರ್ಮ ನೋಡದೆ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದ ಸಿದ್ಧರಾಮಯ್ಯ ಸಂತೋಷ ಲಾಡ್ ಗೆ ಟಿಕೆಟ್ ಪಕ್ಕಾ ಎಂಬ ಸಂದೇಶ ನೀಡಿದ್ದಾರೆ.
ಯಾರು ಮಾಡದ ಕೆಲಸ ಸಂತೋಷ ಲಾಡ್ ಮಾಡಿದ್ದಾರೆ ಎಂದು ಸಿದ್ಧರಾಮಯ್ಯ ಬ್ಯಾಟಿಂಗ್ ಮಾಡಿದ್ದು, ಮಾಜಿ ಸಚಿವ ಸಂತೋಷ ಲಾಡ್ ಹಾಗೂ ನಾಗರಾಜ್ ಛಬ್ಬಿ ಮಧ್ಯೆ ಟಿಕೆಟ್ ಗಾಗಿ ಬಿಗ್ ಫೈಟ್ ನಡೆಯುತ್ತಿದೆ.
ಒಟ್ಟಿನಲ್ಲಿ ನಾಗರಾಜ ಛಬ್ಬಿ ಹಾಗೂ ಸಂತೋಷ ಲಾಡ್ ನಡುವಿನ ಟಿಕೆಟ್ ಪೈಟ್ ಈಗ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇನ್ನೂ ಕಲಘಟಗಿ ಕ್ಷೇತ್ರದಲ್ಲಿ ಅದೃಷ್ಟ ಯಾರ ಕೈ ಹಿಡಿಯುತ್ತದೆ ಎಂಬುವುದನ್ನು ಕಾದು ನೋಡಬೇಕಿದೆ.
Kshetra Samachara
02/08/2021 10:00 am