ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಬಂಡಾಯ ನೆಲದ ಭಗೀರಥ ಮುನೇನಕೊಪ್ಪಗೆ ಸಚಿವ ಸ್ಥಾನ ನೀಡಲು ಶಿವಕುಮಾರ ಬಳಿಗಾರ ಒತ್ತಾಯ

ಅಣ್ಣಿಗೇರಿ : ನವಲಗುಂದ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಹರಿಕಾರ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಶಿವಕುಮಾರ ಬಳಿಗಾರ ಸರ್ಕಾರಕ್ಕೆ ಒತ್ತಾಯಿಸಿದರು.

ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಈ ಬಾರಿ ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗಕ್ಕೆ ಸಚಿವ ಸ್ಥಾನ ನೀಡಬೇಕು. ಪ್ರತಿ ಬಾರಿಯೂ ನಗರ ಪ್ರದೇಶಕ್ಕೆ ಮಾತ್ರ ಸಚಿವ ಸ್ಥಾನ ನೀಡಲಾಗಿದೆ ಎಂದರು.

ಕ್ಷೇತ್ರದಲ್ಲಿ ಹತ್ತು ಸಾವಿರ ಎಕರೆ ಭೂಮಿಗೆ ನೀರಾವರಿ ಯೋಜನೆಯನ್ನು ಜಾರಿಗೆ ತಂದಿರುವದು ರೈತ ಕುಲಕ್ಕೆ ಮರೆಯಲಾರದ ಸಂಗತಿಯಾಗಿದೆ. ಇಂತಹ ರೈತಕುಲದಿಂದ ಬಂದು ರೈತರ ಹಾಗೂ ವಿವಿಧ ವರ್ಗದ ಜನರ ಶ್ರೇಯೋಭಿವೃದ್ಧಿಗಾಗಿ ಹಗಲಿರುಳು ಸೇವೆ ಮಾಡಲಿರುವ ಶಾಸಕ ಶಂಕರಪಾಟೀಲ ಮುನೇನಕೊಪ್ಪ ಗೆ ಸಚಿವ ಸ್ಥಾನ ನೀಡುವದು ಸೂಕ್ತ ಎಂದು ಶಿವಕುಮಾರ ಬಳಿಗಾರ ಸುದ್ದಿಗೋಷ್ಠಿ ಮೂಲಕ ಮಾಡುವ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದರು.

Edited By : Manjunath H D
Kshetra Samachara

Kshetra Samachara

01/08/2021 09:59 pm

Cinque Terre

82.05 K

Cinque Terre

2

ಸಂಬಂಧಿತ ಸುದ್ದಿ