ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಹಾಗೂ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಜಗದೀಶ್ ಶೆಟ್ಟರ್ ಬೊಮ್ಮಾಯಿ ಸಂಪುಟದಲ್ಲಿ ಮಂತ್ರಿಯಾಗುವುದಿಲ್ಲ ಎಂದು ಹೇಳಿಕೆ ಕೊಡುತ್ತಿದಂತೆ ಧಾರವಾಡ ಜಿಲ್ಲೆಯಲ್ಲಿ ಮಂತ್ರಿ ಗಾದಿಗಾಗಿ ಫೈಟ್ ಜೋರಾಗಿದೆ. ಧಾರವಾಡ ಜಿಲ್ಲೆಯಿಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಮಂತ್ರಿಗಿರಿಗೆ ಫಿಕ್ಸ್ ಎನ್ನಲಾಗುತ್ತಿದೆ. ಶಾಸಕರ ಬೆಂಬಲವಿಲ್ಲದೇ ಸಿಎಂ ಆಗಲು ಹೊರಟಿದ್ದ ಅರವಿಂದ ಬೆಲ್ಲದಗೆ ತೀವ್ರ ಹಿನ್ನೆಡೆಯಾದಂತಾಗಿದೆ.
ಶಂಕರ ಪಾಟೀಲಮುನೇನಕೊಪ್ಪ ಪಕ್ಷ ನಿಷ್ಠೆ, ಮುಖಂಡರ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಕಳಸಾ-ಬಂಡೂರಿ ಹೋರಾಟದ ಸಮಯದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಜೊತೆಗೂಡಿ ಹೋರಾಟ ನಡೆಸಿದ್ದರು.ಅದಲ್ಲದೇ ರೈತ ಬಂಡಾಯದ ನೆಲದಿಂದ ಬಂದಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಬಿಜೆಪಿ ಸರ್ಕಾರದಲ್ಲಿ ಗ್ರಾಮೀಣ ಭಾಗದ ಶಾಸಕರಿಗೆ ಎಂದೂ ಮಂತ್ರಿಗಿರಿ ಸಿಕ್ಕಿಲ್ಲ. ಈ ಎಲ್ಲವನ್ನೂ ನೋಡಿದಾಗ ಶಂಕರ ಪಾಟೀಲಮುನೇನಕೊಪ್ಪ ಮಂತ್ರಿಯಾಗುವುದು ಖಚಿತ ಎನ್ನಲಾಗಿದೆ.
ಇನ್ನೂ ಬಸವರಾಜ ಬೊಮ್ಮಾಯಿಯವರು ಹುಬ್ಬಳ್ಳಿಗೆ ಆಗಮಿಸುತ್ತಿದ್ದಂತೆಯೇ ಜೊತೆಯಾದ ಶಾಸಕ ಅಮೃತ ದೇಸಾಯಿಯವರಿಗೆ ಅದೃಷ್ಟ ಕುಲಾಯಿಸಿದರೂ ಅಚ್ಚರಿ ಪಡೆಬೇಕಾಗಿಲ್ಲ. ಅಲ್ಲದೇ ಜಿಲ್ಲೆಯ ಮುಖಂಡರು, ಸಂಘದ ಹಿರಿಯರೊಂದಿಗೆ ಮುನೇನಕೊಪ್ಪ ಹೊಂದಿದ್ದಾರೆ. ಇನ್ನೂ ಮಂತ್ರಿಯಾಗುವುದಿಲ್ಲ ಎಂದಿರುವ ಜಗದೀಶ್ ಶೆಟ್ಟರ್ ಅವರು ಜಿಲ್ಲೆಯಲ್ಲಿಂದ ಯಾರು ಮಂತ್ರಿಯಾಗಬೇಕು ಎಂದು ಪಕ್ಷದ ವರಿಷ್ಠರು ಕೇಳಿದರೆ, ಮುನ್ನೇನುಕೊಪ್ಪ ಹೆಸರು ಸೂಚಿಸುವ ಸಾಧ್ಯತೆ ಹೆಚ್ಚಾಗಿದ್ದು, ಮುಖ್ಯಮಂತ್ರಿ ಸ್ಥಾನಕ್ಕಾಗಿ ಪೈಟ್ ಮಾಡಿ ಕೈ ಸುಟ್ಟುಕೊಂಡಿರುವ ಅರವಿಂದ ಬೆಲ್ಲದ ಯಾವ ಗಾಳ ಉರುಳಿಸುತ್ತಾರೆ ಎಂಬುವುದು ಕುತೂಹಲ ಮೂಡಿಸಿದೆ.
Kshetra Samachara
29/07/2021 09:00 pm