ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಸಿಎಂ ಪ್ರಮಾಣವಚನ ಕ್ಷಣಕ್ಕೆ ಬಿಜೆಪಿರರಿಂದ ವಿಜಯೋತ್ಸವ

ಕುಂದಗೋಳ : ರಾಜ್ಯ ಬಿಜೆಪಿ ಸರ್ಕಾರದ ನೂತನ ಸಾರಥಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿರುವ ಬಸವರಾಜ ಬೊಮ್ಮಾಯಿಯವರ ಪ್ರಮಾಣವಚನದ ಕ್ಷಣಗಳನ್ನು ಕುಂದಗೋಳದ ಬಿಜೆಪಿ ಕಾರ್ಯಕರ್ತರು ತೆರೆದ ಎಲ್.ಇ.ಡಿ ಪರದೆ ಮೇಲೆ ನೋಡಿ ವಿಜಯೋತ್ಸವ ಆಚರಿಸಿದರು.

ಕುಂದಗೋಳ ಪಟ್ಟಣದ ಮೂರಂಗಡಿ ಕ್ರಾಸ್ ಬ್ರಹ್ಮಲಿಂಗೇಶ್ವರ ದೇವಸ್ಥಾನ ಆವರಣದ ಮುಂದೆ ಪಂಚಗ್ರಹ ಹಿರೇಮಠದ ಶಿಥಿಕಂಠೇಶ್ವರ ಶಿವಾಚಾರ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ವಿಕ್ಟರಿ ಚಿಹ್ನೆ ಪ್ರದರ್ಶಿಸಿ ಸಂಭ್ರಮಿಸಿದ ಬಿಜೆಪಿ ಕಾರ್ಯಕರ್ತರು ಬೊಮ್ಮಾಯಿ ಭಾವಚಿತ್ರಕ್ಕೆ ಹೂ ಮಳೆ ಸುರಿಸಿದರು.

ರಾಜ್ಯ ಬಿಜೆಪಿ ಸರ್ಕಾರದ ನೂತನ ಮುಖ್ಯಮಂತ್ರಿಯಾಗಿ ಉತ್ತರ ಕರ್ನಾಟಕದ ಅಭ್ಯರ್ಥಿಗೆ ಮತ್ತೋಮ್ಮೆ ಅವಕಾಶ ನೀಡಿರುವದು ನಮಗೆ ಖುಷಿ ತಂದಿದ್ದು ನಾವು ಅವರಿಂದ ಹೆಚ್ಚಿನ ಅಭಿವೃದ್ಧಿ ಪರ್ವ ನೀರಿಕ್ಷೆ ಮಾಡುತ್ತೇವೆ ಎಂದರು. ಈ ಸಂದರ್ಭದಲ್ಲಿ ತಾಲೂಕಿನ ಸಮಸ್ತ ಬಿಜೆಪಿ ಮುಖಂಡರು ಕಾರ್ಯಕರ್ತರು ಪಟ್ಟಣ ಪಂಚಾಯಿತಿ ಸದಸ್ಯರು ಅಧ್ಯಕ್ಷರು ಹಾಗೂ ನಗರ ಘಟಕದ ಅಧ್ಯಕ್ಷರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

28/07/2021 04:09 pm

Cinque Terre

31.35 K

Cinque Terre

0

ಸಂಬಂಧಿತ ಸುದ್ದಿ