ಹುಬ್ಬಳ್ಳಿ: ಕೋರ್ಟ್ ತೀರ್ಪು ಕೊಡುವ ಪೂರ್ವದಲ್ಲಿ ಮಠದ ಆಸ್ತಿ ಮಠಕ್ಕೆ ಬಿಡಬೇಕು - ದಿಂಗಾಲೇಶ್ವರ ಸ್ವಾಮೀಜಿ

ಹುಬ್ಬಳ್ಳಿ- ಮೂರುಸಾವಿರ ಮಠದ ಆಸ್ತಿಯನ್ನು ಮರಳಿ ಪಡೆಯಲು ನಮ್ಮ ಹೋರಾಟ ನಿರಂತರವಾಗಿರಲಿದೆ. ಇದರಿಂದ ಹಿಂದೆ ಸರಿಯುವ ಮಾತು ಇಲ್ಲ, ಎಂದು ಬಾಲೆಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ನಗರದಲ್ಲಿಂದು ಮಾತನಾಡಿದ ಅವರು, ವಿಷಯ ಕುರಿತಂತೆ ಮಠಗಳ ಆಸ್ತಿ ಉಳಿಸುವ ಉದ್ದೇಶದಿಂದ ಅಖಿಲ ಭಾರತ ವೀರೇಶೈವ ಮಹಾಸಭೆ
ಶಂಕರ್ ಬಿದರಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದೆ. ಈ ಸಮಿತಿ ಮೂರುಸಾವಿರ ಮಠದ ಆಸ್ತಿ ಮರಳಿ ಕೊಡಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು. ಕೆ ಎಲ್ ಇ ಸಂಸ್ಥೆ ಹಠಮಾರಿ ಧೋರಣೆ ತೋರುತ್ತಿರುವದು ವಿಷದಾದನೀಯವಾಗಿದೆ.
ಕೋರ್ಟ್ ತೀರ್ಪು ಕೊಡುವ ಪೂರ್ವದಲ್ಲಿ ಮಠದ ಆಸ್ತಿ ಮಠಕ್ಕೆ ಬಿಡಬೇಕು. ಹಾವೇರಿ ಗದಗ, ಹುಬ್ಬಳ್ಳಿಯಲ್ಲಿ ಮಠದ ಅಭಿಮಾನಿಗಳು ಹಾಗೂ ಭಕ್ತರ ಸಭೆ ಕರೆದು ಮುಂದಿನ ಹೋರಾಟದ ರೂಪರೇಷ ಸಿದ್ದಪಡಿಸಲಾಗುವದು.
ಶಂಕರಣ್ಣ ಮುನವಳ್ಳಿಯವರು ಹಿರಿಯರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವದಾಗಿ ಹೇಳಿದ್ದರು. ಹೀಗಾಗಿ ಕೆಲ ದಿನಗಳ ಕಾಲ ಹೋರಾಟ ಸ್ಥಗಿತಗೊಳಿಸಿದ್ದೇವು‌. ಆದ್ರೆ ಈಗ ನಮ್ಮ ಹೋರಾಟವನ್ನು ಮತ್ತೊಂದು ದಿಕ್ಕಿನಲ್ಲಿ ತಿರುಗುವ ಸೂಚನೆ ಕಾಣುತ್ತಿದೆ. ಹೀಗಾಗಿ ಮತ್ತೊಮ್ಮೆ ಹೋರಾಟ ನಡೆಸಲು ಸಿದ್ದತೆ ಮಾಡುತ್ತಿದ್ದೇವೆ ಎಂದರು.

Kshetra Samachara

Kshetra Samachara

10 days ago

Cinque Terre

50.61 K

Cinque Terre

1

  • Bhosale
    Bhosale

    ಸಾರ್ಥಕತೆ ತುಂಬಿರುವಂತಹ ಲೋಕ