ಜನತಾ ಪಕ್ಷದ ರಾಜ್ಯ ಕೃಷಿ ಮತ್ತು ಕಾರ್ಮಿಕರ ಅಧ್ಯಕ್ಷರಾಗಿ ಜಯರಾಜ ಹೂಗಾರ ನೇಮಕ
ಅಣ್ಣಿಗೇರಿ : ಜನತಾ ಪಕ್ಷದ ರಾಜ್ಯ ಕೃಷಿ ಮತ್ತು ಕಾರ್ಮಿಕರ ಅಧ್ಯಕ್ಷರನ್ನಾಗಿ ಸ್ಥಳೀಯ ರೈತ ಹೋರಾಟ ಸಮಿತಿ ಅಧ್ಯಕ್ಷ ಜಯರಾಜ ದಾನಪ್ಪ ಹೂಗಾರ ಅವರನ್ನು ನೇಮಕ ಮಾಡಲಾಗಿದೆ ಎಂದು ಜನತಾ ಪಕ್ಷದ ರಾಜ್ಯಾಧ್ಯಕ್ಷ ಇ.ಆನಂದ ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದರು.
ಮುಂಬರುವ ದಿನಗಳಲ್ಲಿ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ನಮ್ಮ ಪಕ್ಷದ ತತ್ವ ,ಸಿದ್ಧಾಂತ ಮತ್ತು ಧ್ಯೇಯ ಧೋರಣೆಯಲ್ಲಿ ವಿಶ್ವಾಸವನ್ನಿಟ್ಟುಕೊಂಡು ಹೋಗಬೇಕು ಮತ್ತು ಉತ್ತರ ಕರ್ನಾಟಕ ಭಾಗದ ಉಸ್ತುವಾರಿಯನ್ನು ನಿಮಗೆ ನೀಡಲಾಗಿದ್ದು ಪಕ್ಷದ ಬಲವರ್ಧಗಾಗಿ ಶ್ರಮಿಸಬೇಕೆಂದು ರಾಜ್ಯಾಧ್ಯಕ್ಷ ತಿಳಿಸಿದರು.