ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಬೇಜವಾಬ್ದಾರಿಯುತ ಹೇಳಿಕೆ ಕೊಟ್ಟ ಕೃಷಿ ಸಚಿವ ಪಾಟೀಲ್

ಧಾರವಾಡ: ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳಾ ಉದ್ಯೋಗಿಗಳ ಸಾವಿನ ವಿಷಯಕ್ಕೆ ಸಂಬಂಧಿಸಿದಂತೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಬೇಜವಾಬ್ದಾರಿಯುತ ಹೇಳಿಕೆ ಕೊಟ್ಟಿದ್ದಾರೆ.

ಧಾರವಾಡದ ಕೃಷಿ ವಿವಿಯಲ್ಲಿ ನಡೆದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದ ಅವರು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಯಾರ್ಯ್ಯಾರೋ ಎಲ್ಲೆಲ್ಲಿಗೋ ಹೋದಾಗ ಅಪಘಾತವಾದರೆ ಅದಕ್ಕೆ ಕೃಷಿ ವಿವಿ ಹೇಗೆ ಜವಾಬ್ದಾರಿಯಾಗುತ್ತದೆ? ಖಾಸಗಿ ಜೀವನದ ರಜೆ ದಿನಗಳಲ್ಲಿ ಅಪಘಾತವಾಗಿ ಅವರು ಮೃತಪಟ್ಟರೆ ಅದಕ್ಕೆ ಕೃಷಿ ವಿವಿ ಜವಾಬ್ದಾರಿಯಾಗುವುದಿಲ್ಲ. ಅಪಘಾತಕ್ಕೂ ಹಾಗೂ ಕಿರುಕುಳಕ್ಕೂ ಸಂಬಂಧವಿಲ್ಲ. ನನ್ನ ಗಮನಕ್ಕೆ ಬಂದರೆ ತನಿಖೆ ಮಾಡಿಸುತ್ತೇವೆ. ಈ ಮಹಿಳಾ ಉದ್ಯೋಗಿಗಳ ಸಾವಿನ ಪ್ರಕರಣದ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದು ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ.

ರಾಕೇಶ್ ಟಿಕಾಯತ್ ಅವರು ರಾಜ್ಯಕ್ಕೆ ಬರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕದಲ್ಲಿ ಶಾಂತಿ ನೆಮ್ಮದಿ ಇದೆ. ಟಿಕಾಯತ್ ಬಂದರೆ ಏನೂ ಸಮಸ್ಯೆ ಆಗುವುದಿಲ್ಲ ಎಂದರು.

Edited By : Manjunath H D
Kshetra Samachara

Kshetra Samachara

27/02/2021 11:47 am

Cinque Terre

29.57 K

Cinque Terre

12

ಸಂಬಂಧಿತ ಸುದ್ದಿ