ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸರ್ಕಾರಗಳ ವಿರುದ್ಧ ಒಂದಾಗುತ್ತಿವೆ ವಿವಿಧ ಸಂಘಟನೆಗಳು

ಧಾರವಾಡ: ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ ಹಾಗೂ ದೆಹಲಿಯಲ್ಲಿ ನಡೆಯುತ್ತಿರುವ ರೈತ ಚಳವಳಿ ಬೆಂಬಲಿಸಿ, ರಾಜ್ಯದಲ್ಲೂ ವಿವಿಧ ಸಂಘಟನೆಗಳ ಜತೆಗೂಡಿ ಸಂಯುಕ್ತ ಹೋರಾಟ ಸಂಘಟನೆ ರೂಪಿಸಲಾಗುತ್ತಿದೆ ಎಂದು ಸಿಟಿಜನ್ ಫಾರ್ ಡೆಮಾಕ್ರಸಿ ಸಂಸ್ಥೆ ಅಧ್ಯಕ್ಷ ಎಸ್.ಆರ್.ಹಿರೇಮಠ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ, ರಾಜ್ಯ ಸರ್ಕಾರಗಳು ಸರ್ವಾಕಾರಿ ಧೋರಣೆಯಲ್ಲಿ ನಡೆಯುತ್ತಿವೆ. ದೇವರಾಜ ಅರಸು ಅವರು ಜಾರಿಗೆ ತಂದಿದ್ದ ರೈತರ ಪರ ಭೂಸುಧಾರಣಾ, ಎಪಿಎಂಸಿ ಕಾಯ್ದೆ ಬಗ್ಗೆ ಇಂಗ್ಲಿಷ್, ಕನ್ನಡದಲ್ಲಿ ಕಿರುಹೊತ್ತಿಗೆ ತರಲಾಗುವುದು. ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲೂ ನೈತಿಕತೆ ಅಧಃಪತನ ಹಾದಿಯಲ್ಲಿವೆ. ಈ ಸಮಯದಲ್ಲಿ ಆದರ್ಶ ಸಮಾಜದ ಪರಿಕಲ್ಪನೆಯ ಸಮಗ್ರ ಪರಿಚಯ ನೀಡುವ ಉದ್ದೇಶದಿಂದ ಸಿಟಿಜನ್ ಫಾರ್ ಡೆಮಾಕ್ರಸಿ ಸಂಘಟನೆಗಳು ಜನಾಂದೋಲನ ರೂಪಿಸಲು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿವೆ ಎಂದರು.

ಅಲ್ಲದೇ, ಯುವಕರಲ್ಲಿ ನಾಯಕತ್ವದ ಗುಣ ಬೆಳೆಸಲು ಫೆ. 27, 28ರಂದು ಸಮಾಜ ಪರಿವರ್ತನಾ ಸಮುದಾಯದ ಕಚೇರಿಯಲ್ಲಿ ಸಂಘಟನಾತ್ಮಕ ಕಲಿಕಾ ಶಿಬಿರ ಆಯೋಜಿಸಿದೆ. ಫೆ. 27ರಂದು ಬೆಳಗ್ಗೆ 10ರಿಂದ ಸಂಜೆ 6 ರವರೆಗೆ ಹಾಗೂ ಫೆ. 28 ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಶಿಬಿರ ನಡೆಯಲಿದೆ. ಬೆಳಗಾವಿಯ ದಿಲೀಪ್ ಕಾಮತ್ ಅವರು ಶಿಬಿರ ನಡೆಸಿಕೊಡಲಿದ್ದಾರೆ ಎಂದರು.

Edited By : Manjunath H D
Kshetra Samachara

Kshetra Samachara

26/02/2021 08:22 pm

Cinque Terre

60.87 K

Cinque Terre

7

ಸಂಬಂಧಿತ ಸುದ್ದಿ