ಕಲಘಟಗಿ: ತಾಲೂಕಿನ ಗುಡ್ಡದಹುಲಿಕಟ್ಟಿ ಗ್ರಾಮದಲ್ಲಿ ಪರಿಶಿಷ್ಟ ಪಂಗಡದ ಕಾಲೋನಿಯ ಸಿ. ಸಿ ರಸ್ತೆಯ ಅಂದಾಜು 10 ಲಕ್ಷ ರೂಪಾಯಿಗಳ ಕಾಮಗಾರಿಗೆ ಶಾಸಕ ಸಿ. ಎಂ ನಿಂಬಣ್ಣವರ ಭೂಮಿ ಪೂಜೆ ನೆರೆವೇರಿಸಿದರು.
ನಂತರ ಮಾತನಾಡಿದ ಅವರು ಅತಿವೃಷ್ಟಿಯಿಂದ ಹಾಳಾದ ರಸ್ತೆ,ಸೇತುವೆ ನಿರ್ಮಾಣ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿವೆ. ಗ್ರಾಮೀಣ ಭಾಗದ ಸಿ.ಸಿ ರಸ್ತೆ ಹಾಗೂ ಎಸ್. ಸಿ ಕಾಲೋನಿಗೆ ಹಾಗೂ ಕುಡಿಯುವ ನೀರಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ತಿಳಿಸಿದರು.
ಮತಕ್ಷೇತ್ರಕ್ಕೆ ಇನ್ನು ಹೆಚ್ಚಿನ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.ತಾ ಪಂ ಅಧ್ಯಕ್ಷೆ ಸುನೀತಾ ಮ್ಯಾಗಿನಮನಿ,ಸದಸ್ಯೆ ವಿಜಯಲಕ್ಷ್ಮಿ ಆಡಿನವರ,ತಾಲ್ಲೂಕಾ ಬಿಜೆಪಿ ಅಧ್ಯಕ್ಷ ಬಸವರಾಜ ಶೆರೇವಾಡ,ನಿಂಗಪ್ಪ ಸುತಗಟ್ಟಿ, ಪರಶುರಾಮ ರಜಪೂತ,ನರೇಶ ಮಲೆನಾಡು,ರಾಮಣ್ಣ ಬಂಡಿವಡ್ಡರ ಅಧಿಕಾರಿಗಳಾದ ಬಸವರಾಜ ಬಾಗೇವಾಡಿ,ರಾಮರಾವ ಉಪಸ್ಥಿತರಿದ್ದರು.
Kshetra Samachara
25/02/2021 06:59 pm