ಹುಬ್ಬಳ್ಳಿ: ಅಲ್ಪಸಂಖ್ಯಾತರ ಪಟ್ಟಿಯಲ್ಲಿರುವ ಜೈನರಿಗೆ ವಿಶೇಷ ಸೌಲಭ್ಯಗಳನ್ನು ನೀಡಬೇಕು ಎಂದು ಉತ್ತರ ಕರ್ನಾಟಕ ಜೈನ ಮಹಾಸಂಘದ ಅಧ್ಯಕ್ಷ ಬಿ ಎ ಪಾಟೀಲ್ ಒತ್ತಾಯಿಸಿದರು.
ನಗರದಲ್ಲಿಂದು ಮಾತನಾಡಿದ ಅವರು, ಹಲವು ಸಮಾಜಗಳು ಮೀಸಲಾತಿಗಳಾಗಿ ಪ್ರತಿಭಟನೆ ಮಾಡುತ್ತಿವೆ. ಆದರೆ ಜೈನರು ಮೀಸಲಾತಿಗಾಗಿ ಹೋರಾಟ ಮಾಡುವದಿಲ್ಲ. ಶಾಂತಪ್ರೀಯರಾದ ನಾವು ಅಲ್ಪಸಂಖ್ಯಾತ ಪಟ್ಟಿಯಲ್ಲಿ ಮುಸ್ಲಿಂ, ಕ್ರೈಸ್ತ, ಬುದ್ದ, ಪಾರಸಿ ಜೈನ ಹಾಗೂ ಶಿಖರನ್ನು ಸೇರ್ಪಡೆ ಮಾಡಲಾಗಿದೆ. ಅಲ್ಪಸಂಖ್ಯಾತರಿಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ನೀಡುವ ಸೌಲಭ್ಯಗಳಲ್ಲಿ ವಾರ್ಷಿಕ ಆದಾಯ ಮೀತಿ ಹೇರಲಾಗಿದೆ.ಈ ಆದಾಯದ ಮೀತಿ ತೀರಾ ಕಡಿಮೆ ಇದ್ದು, ಬಹುತೇಕ ಜೈನರು ಈ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಜೈನ ಸಮುದಾಯ ವಂಚಿತವಾಗಿದೆ ಎಂದರು.
ಹೀಗಾಗಿ ಜೈನರಿಗಾಗಿ ರಾಜಕೀಯ ಮೀಸಲಾತಿ, ಸರ್ಕಾರಿ ಸ್ವಾಯತ್ತ ಸಂಸ್ಥೆಗಳಲ್ಲಿ ಜೈನರನ್ನು ಕಡ್ಡಾಯವಾಗಿ ನಾಮನಿರ್ದೇಶನ ಮಾಡಬೇಕು, ಕರ್ನಾಟಕ ಅಲ್ಪ ಸಂಖ್ಯಾತ ಅಭಿವೃದ್ಧಿ ನಿಗಮ ಮತ್ತು ಆಯೋಗದಲ್ಲಿ ಜೈನರಿಗೆ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿದರು.
Kshetra Samachara
24/02/2021 04:40 pm