ಹುಬ್ಬಳ್ಳಿ - ಎಸ್. ಎಸ್. ಕೆ ತುಳಜಾಭವಾನಿ ದೇವಸ್ಥಾನ ಕೇಂದ್ರ ಸಮಿತಿ ಹುಬ್ಬಳ್ಳಿ ಧಾರವಾಡ ವತಿಯಿಂದ, ಕೇಶ್ವಾಪುರದ ಕುಸುಗಲ್ ರಸ್ತೆಯ ಶ್ರೀನಿವಾಸ ಗಾರ್ಡ ನ್ ನಲ್ಲಿ ಸತ್ಕಾರ ಅಭಿನಂದನಾ ಕಾರ್ಯಕ್ರಮ ಜರುಗಿತು.
ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿ ಒಂದು ವರ್ಷ ಪೂರ್ಣಗೊಳಿಸಿದ ಸಂತಸದಲ್ಲಿ ನಾಗೇಶ್ ಕಲ್ಬುರ್ಗಿ ಇವರಿಗೆ ಅಧ್ಯಕ್ಷ ಸ್ಥಾನ, ರಾಜು ಜರತಾರಘರ ಇವರಿಗೆ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬೆಂಗಳೂರು ನಿರ್ದೇಶಕ, ರಂಜನ ಬಂಕಾಪುರ ಇವರಿಗೆ ಆಶ್ರಯ ಸಮಿತಿ ಸದಸ್ಯ, ಸಂಗೀತಾ ಬದ್ದಿ ಇವರಿಗೆ ಭೂ ನ್ಯಾಯ ಮಂಡಳಿ ಸದಸ್ಯ ಸ್ಥಾನ ದೊರಕಿಸಿಕೊಟ್ಟ ಬಿಜೆಪಿಯ ನಾಯಕರಾದ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ, ಪ್ರದೀಪ್ ಶೆಟ್ಟರ್, ಅರವಿಂದ ಬೆಲ್ಲದ, ಹಾಗೂ ಇನ್ನೂ ಅನೇಕ ಗಣ್ಯರಿಗೆ, ಎಸ್ ಎಸ್ ಕೆ ಸಮಾಜ ಕೇಂದ್ರ ಪಂಚ ಸಮಿತಿ ಮುಖ್ಯ ಧರ್ಮದರ್ಶಿ ನೀಲಕಂಠಸಾ ಜಡಿ ಅವರ ನೇತೃತ್ವದಲ್ಲಿ ಸತ್ಕರಿಸಿ ಅಭಿನಂದಿಸಲಾಯಿತು.
ಅಶೋಕ ಬಾಳು, ಮಗಜಿಕೂಂಡಿ, ಯೋಗೀಶ ಹಬಿಬ, ವಿಜಯ್ ಕಲ್ಬುರ್ಗಿ, ವೆಂಕಟೇಶ್ ಹಬೀಬ್, ಸದು ಕಬಾಡಿ, ದೀಪಕ್ ಜಿತೂರಿ, ಅಕ್ಷಯ್ ಬದ್ದಿ, ಪ್ರವೀಣ್ ಪವಾರ್ ಹಾಗೂ ಎಸ್ ಎಸ್ ಕೆ ಸಮಾಜದ ಸಾವಿರಾರು ಬಂಧುಗಳು ಎಸ್ ಎಸ್ ಕೆ ಸಮಾಜದ ಎಲ್ಲ ಹಿರಿಯರು ಪಂಚ ಪ್ರಮುಖರು ರಾಜಕೀಯ ಮುಖಂಡರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು, ಎಂದು ಎಸ್ ಎಸ್ ಕೆ ಸಮಾಜದ ಯುವ ಮುಖಂಡ ನಾಗರಾಜ ಪಟ್ಟಣ ತಿಳಿಸಿದರು.
Kshetra Samachara
23/02/2021 08:43 pm