ಧಾರವಾಡ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ದೆಹಲಿಗೆ ಏಕೆ ಹೋಗಿದ್ದಾರೋ ಗೊತ್ತಿಲ್ಲ. ಅವರು ಯಾವ ಒತ್ತಡಕ್ಕೂ ಮಣಿಯೋದಿಲ್ಲ ಎನ್ನುವುದು ಅವರ ಅಭಿಪ್ರಾಯ. ಅದರ ಬಗ್ಗೆ ನಾನು ಹೆಚ್ಚಿಗೆ ಮಾತನಾಡೋದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸನಗೌಡ ಪಾಟೀಲ ಯತ್ನಾಳ ಅವರ ಬಗ್ಗೆ ಶೆಟ್ಟರ್ ಹೆಚ್ಚಿಗೆ ಏನನ್ನೂ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಹುಬ್ಬಳ್ಳಿ, ಧಾರವಾಡ ಬೈಪಾಸ್ ರಸ್ತೆ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸಚಿವ ಜೋಶಿ ಹಾಗೂ ನಾನು ಅಶೋಕ ಖೇಣಿ ಅವರ ಮನವೊಲಿಸಿ ಆ ರಸ್ತೆ ಅಗಲೀಕರಣಕ್ಕೆ ಪ್ರಯತ್ನಿಸಿದ್ದೇವೆ. ಎಲ್ಲಿಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕೋ ಆ ಕೆಲಸ ನಡೆಯುತ್ತದೆ. ಡಿಪಿಆರ್ ಕೂಡ ಆಗಿದೆ ಎಂದರು.
ಸಪ್ರೀಂಕೋರ್ಟ್ ಗೆ ಹುಬ್ಬಳ್ಳಿ, ಧಾರವಾಡ ಬೈಪಾಸ್ ಉತ್ಕೃಷ್ಟ ರಸ್ತೆ ಎಂದು ವರದಿ ನೀಡಲಾಗಿದೆ ಅಲ್ಲಿ ಏನು ಸಮಸ್ಯೆಯೇ ಇಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶೆಟ್ಟರ್, ಆ ರಸ್ತೆಯಲ್ಲಿ ಅಪಘಾತಗಳೇ ಆಗಿಲ್ಲ ಎನ್ನುವುದು ತಪ್ಪು. ಅಪಘಾತಗಳಾದ ಉದಾಹರಣೆ ನಮ್ಮ ಕಣ್ಣ ಮುಂದೆಯೇ ಇದೆ. ಸುಪ್ರೀಂಗೆ ಸಲ್ಲಿಸಿರುವ ವರದಿಯನ್ನು ನಾನು ನೋಡಿಲ್ಲ. ಅದನ್ನು ನೋಡಿ ಪ್ರತಿಕ್ರಿಯೆ ನೀಡುತ್ತೇನೆ ಎಂದರು.
Kshetra Samachara
22/02/2021 12:47 pm