ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಕಮಡೊಳ್ಳಿ ಗ್ರಾಪಂ ಸಭೆ ಹಿಂದುಳಿದ ಕಾಮಗಾರಿಗೆ ವಿಶೇಷ ಒತ್ತು

ಕುಂದಗೋಳ : ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ ಹಿಂದುಳಿದ ಅಭಿವೃದ್ಧಿ ಕಾರ್ಯಗಳಿಗೆ ವಿಶೇಷ ಒತ್ತು ನೀಡಿ ಅವುಗಳನ್ನೇ ಮುಂದುವರೆಸೋಣ ಎಂದು ಕಮಡೊಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಂದ್ರ ಶಿರಮಣ್ಣನವರ ಹೇಳಿದರು.

ಅವರು ನೂತನ ಗ್ರಾಮ ಪಂಚಾಯಿತಿ ಸದಸ್ಯರ ಮೊದಲ ಸಾಮಾನ್ಯ ಸಭೆಯನ್ನು ನಾಡಗೀತೆ ಹೇಳುವ ಮೂಲಕ ಉದ್ಘಾಟಿಸಿ ಮಾತನಾಡಿ ಬೀದಿ ದೀಪಗಳು, ನೀರಿನ ವ್ಯವಸ್ಥೆ, ಒಳಚರಂಡಿಯ ಸ್ವಚ್ಚತೆ ಬಗ್ಗೆ ಸರಿಯಾದ ಸಮಯಕ್ಕೆ ನಿರ್ವಹಣೆ ಮತ್ತು ಪಂಚಾಯತಿ ಬಾಕಿ ಉಳಿದ ಹಣದ ಸದುಪಯೋಗ, ನರೇಗಾ ಯೋಜನೆ ಮುಖಾಂತರ ಗ್ರಾಮಗಳ ಅಭಿವೃದ್ಧಿಗೆ ಕಾರ್ಯಗಳಿಗೆ ಒತ್ತು ನೀಡಲು ಸದಸ್ಯರ ಜೊತೆ ಚರ್ಚೆ ನಡೆಸಿದರು.

ಗ್ರಾಮ ಪಂಚಾಯಿತಿ ಸಭೆಯಲ್ಲಿ ನೆರೆದ ಸದಸ್ಯರು ಈ ಬಗ್ಗೆ ಅವರವರ ಅಭಿಪ್ರಾಯ ಹಂಚಿಕೊಂಡು ಕಾಮಗಾರಿ ಕೈಗೊಳ್ಳಲು ಸೂಚಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಶೇಖರ ಮರೇಪ್ಪನವರ, ಗ್ರಾಪಂ ಸರ್ವ ಸದಸ್ಯರು, ಪಿಡಿಒ ತುಪ್ಪದಗೌಡ್ರ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

19/02/2021 01:34 pm

Cinque Terre

13.65 K

Cinque Terre

0

ಸಂಬಂಧಿತ ಸುದ್ದಿ