ಕುಂದಗೋಳ : ಗ್ರಾಮೀಣ ಮಟ್ಟದ ಮಕ್ಕಳು ಉತ್ತಮ ಶಿಕ್ಷಣ ಪಡೆದು ಶಿಸ್ತು ಬದ್ಧವಾದ ಜೀವನ ಶೈಲಿಗೆ ಒಳಗಾಗುವ ನಿಟ್ಟಿನಲ್ಲಿ ಸಿ.ಆಯ್.ಸಿ ಸ್ನಾತಕೋತ್ತರ ಕೇಂದ್ರದ ಎಮ್.ಕಾಂ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಕ್ಲಾರ್ಕ್ ಇನ್ ಹೋಟೇಲ್ ಒಳಗೆ ಏರ್ಪಡಿಸಿದೆ ಇದು ಮನರಂಜನೆಗಲ್ಲ ಎಂದು ಮುಖ್ಯಮಂತ್ರಿ ಮಂತ್ರಿಗಳ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ ಹೇಳಿದರು.
ಅವರು ಕುಂದಗೋಳ ಮತಕ್ಷೇತ್ರದ ಅದರಗುಂಚಿ ಸಿ.ಆಯ್.ಸಿ ಸ್ನಾತಕೋತ್ತರ ಕೇಂದ್ರದ 2020-21 ನೇ ಸಾಲಿನ ಎಮ್.ಕಾಂ ಪ್ರಥಮ ವರ್ಷದ ವಿಧ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಅವಕಾಶವಾದಿ ಆಗಿ ಸಿಕ್ಕ ಅವಕಾಶ ಪಡೆದು ಭವಿಷ್ಯ ರೂಪಿಸಿಕೊಳ್ಳಿ ಎಂದರು.
ಬುಲಬುಲೆ ಕರಿಯರ್ ಅಕಾಡೆಮಿ ನಿರ್ದೇಶಕ ಗುರುರಾಜ ಮಾತನಾಡಿ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಯಾವ ಹಂತದ ಅಭ್ಯಾಸ ಪರೀಕ್ಷೆ ಎದುರಿಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು.
ಮಾಜಿ ಶಾಸಕ ಕೃಷಿ ಮತ್ತು ರಫ್ತು ನಿಗಮದ ಅಧ್ಯಕ್ಷ ಎಸ್.ಐ.ಚಿಕ್ಕನಗೌಡರ ಮಾತನಾಡಿ ಶಿಕ್ಷಣ ಸಂಸ್ಥೆ ಕಾರ್ಯ ಚಟುವಟಿಕೆ ವಿದ್ಯಾರ್ಥಿಗಳ ಸಾಧನೆ ಪ್ರಶಂಸೆ ಮಾಡಿದರು. ಈ ವೇಳೆ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸ್ಪರ್ಧೆ ನಡೆದವು.
ಈ ಸಂದರ್ಭದಲ್ಲಿ ಸಿ.ಆಯ್.ಸಿ ಶಿಕ್ಷಣ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಆರ್.ಎಫ್.ಬರಮಗೌಡ್ರ, ಮುಖ್ಯಸ್ಥ ಡಾ.ಸಂದೀಪ ಕುಲಕರ್ಣಿ, ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
Kshetra Samachara
17/02/2021 08:49 pm