ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ : ಅನಧಿಕೃತ ಸಾರಾಯಿ ಮಾರಾಟ ನಿಷೇಧಕ್ಕೆ ಆಗ್ರಹಿಸಿದ ಜಯಕರ್ನಾಟಕ

ಅಣ್ಣಿಗೇರಿ : ತಾಲೂಕಿನ ಶಿಶ್ವಿನಹಳ್ಳಿ ಗ್ರಾಮವನ್ನು ಸಾರಾಯಿ ಮುಕ್ತ ಗ್ರಾಮವನ್ನಾಗಿ ಮಾಡಬೇಕು ಎಂದು ಜಯಕರ್ನಾಟಕ ಸಂಘಟನೆ ವತಿಯಿಂದ ತಹಶೀಲ್ದಾರ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.

ಶಿಶ್ವಿನಹಳ್ಳಿ ಗ್ರಾಮದಲ್ಲಿ ಕೆಲವು ಅನಧಿಕೃತ ಸಾರಾಯಿ ಮಾರಾಟಗಾರರು ಬೇಕಾಬಿಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಶಾಲಾ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ. ಇದನ್ನು ಕೂಡಲೇ ಹತ್ತಿಕ್ಕಬೇಕು ಎಂದು ಜಯಕರ್ನಾಟಕ ಸಂಘಟನೆ ವತಿಯಿಂದ ಒತ್ತಾಯಿಸಲಾಯಿತು.

ಈ ವೇಳೆ ಜಿಲ್ಲಾಧ್ಯಕ್ಷರಾದ ಸುಧೀರ ಮುದೋಳ, ಲಕ್ಷ್ಮಣ ದೊಡಮನಿ, ಮುತ್ತು ಕುಲಕರ್ಣಿ, ಮಂಜುನಾಥ್ ಸುತಗಟ್ಟಿ, ಚಂದ್ರು ಅಂಗಡಿ, ಯಲ್ಲಮ್ಮ ಕಡೆಮಣಿ ಸೇರಿದಂತೆ ಹಲವರು ಇದ್ದರು.

Edited By : Manjunath H D
Kshetra Samachara

Kshetra Samachara

17/02/2021 07:53 pm

Cinque Terre

20.49 K

Cinque Terre

1

ಸಂಬಂಧಿತ ಸುದ್ದಿ