ಕುಂದಗೋಳ : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 44ನೇ ಜನ್ಮದಿನದ ಅಂಗವಾಗಿ ಕುಂದಗೋಳ ಪಟ್ಟಣದ ದರ್ಶನ ತೂಗುದೀಪ ಅಭಿಮಾನಿ ಬಳಗದವರು ಕುಂದಗೋಳ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು, ಹಾಲು, ಬಿಸ್ಕೇಟ್ ವಿತರಿಸಿದರು.
ದರ್ಶನ್ ಭಾವಚಿತ್ರಕ್ಕೆ ಹಾಲಾಭಿಷೇಕ ನೆರವೇರಿಸಿದ ಯುವಕರು ದರ್ಶನ್ ಅವರ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಾಲು ವಿತರಿಸಿ ಜನ್ಮ ದಿನವನ್ನು ಆಚರಿಸಿದರು.
Kshetra Samachara
16/02/2021 06:59 pm